Ad imageAd image

ದೇವರಮೂರ್ತಿಗಾಗಿ 2 ಗ್ರಾಮಸ್ಥರ ಮಧ್ಯೆ ಗಲಾಟೆ, ಇಬ್ಬರ ಸಾವು

Nagesh Talawar
ದೇವರಮೂರ್ತಿಗಾಗಿ 2 ಗ್ರಾಮಸ್ಥರ ಮಧ್ಯೆ ಗಲಾಟೆ, ಇಬ್ಬರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ(Ballari): ದೇವರಮೂರ್ತಿಗಾಗಿ ಎರಡು ಗ್ರಾಮಸ್ಥರ ನಡುವೆ ಗಲಾಟೆ ನಡೆದ್ದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ನೂರು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟದ ಮಾಳ ಮಲ್ಲೇಶ್ವರಸ್ವಾಮಿ ಬನ್ನಿ ಉತ್ಸವದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಆದವನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವರಮೂರ್ತಿಗಾಗಿ ಅಕ್ಕಪಕ್ಕದ ಎರಡು ಗ್ರಾಮಗಳ ನಡುವೆ ಗಲಾಟೆಯಾಗಿದೆ. ಕೋಲುಗಳಿಂದ ಹೊಡೆದಾಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕರ್ನೂಲ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ರೀತಿ ಹೊಡೆದಾಡುಕೊಳ್ಳುವ ಪದ್ಧತಿ ಇಂದಿಗೂ ಇರುವುದು ನಿಜಕ್ಕೂ ಅಮಾನವೀಯ. ಇದರಿಂದ ಜೀವಗಳು ಬಲಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

WhatsApp Group Join Now
Telegram Group Join Now
Share This Article