ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಮದ್ಯದ ನಶೆಯಲ್ಲಿ ಯುವಕರಿಬ್ಬರು ಕೃಷಿಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಯಡವಾಲ ಗ್ರಾಮದಲ್ಲಿ ನಡೆದಿದೆ. ಕುಂಬರಗುಂಡಿ ನಿವಾಸಿ ಚಿರಂಜೀವಿ(22) ಹಾಗೂ ಗೌತಮ್ ನಾಯ್ಕ(22) ಮೃತ ಯುವಕರಾಗಿದ್ದಾರೆ. ಯಡವಾಲ ಗ್ರಾಮಕ್ಕೆ ಸ್ನೇಹಿತನ ತಂಗಿ ಮಗು ನೋಡಲು 10 ಜನರು ಸ್ನೇಹಿತರೊಂದಿಗೆ ಹೋಗಿದ್ದ ವೇಳೆ ಈ ಅನಾಹುತ ನಡೆದಿದೆ.
ಮಗು ನೋಡಿದ ಬಳಿಕ ತೋಟದಲ್ಲಿ ಪಾರ್ಟಿ ಮಾಡಿದ್ದಾರೆ. ಕುಡಿದ ನಶೆಯಲ್ಲಿ ಕೃಷಿಹೊಂಡದ ಬಳಿ ಸ್ನೇಹಿತನೊಬ್ಬ ಹೋಗಿದ್ದಾನೆ. ಬಳಿಕ ಕಾಲು ಜಾರಿ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಹೋದ ಸ್ನೇಹಿತ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.