Ad imageAd image

ಸಿಂದಗಿ: ವಾಯುಭಾರ ಕುಸಿತದ ಎಫೆಕ್ಟ್ ಬಲು ಜೋರು

Nagesh Talawar
ಸಿಂದಗಿ: ವಾಯುಭಾರ ಕುಸಿತದ ಎಫೆಕ್ಟ್ ಬಲು ಜೋರು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಕಳೆದ ಎರಡು ದಿನಗಳಿಂದ ಸಿಂದಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಳೆ(Rain) ಸತತವಾಗಿ ಸುರಿಯುತ್ತಿದೆ. ಶನಿವಾರ ಮಧ್ಯರಾತ್ರಿಯಿಂದಲೇ ಮಳೆ ಶುರುವಾಗಿದ್ದು, ಸೋಮವಾರವೂ ಮುಂದುವರೆದಿದೆ. ಹೀಗಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಬಂಗಾಳಕೊಲ್ಲಿಯ ವಾಯುಭಾರ(Low Pressure area) ಕುಸಿತದ ಪರಿಣಾಮ ವಿಜಯಪುರ ಜಿಲ್ಲೆಯಾದ್ಯಂತ ಸತತವಾಗಿ ಮಳೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಸೂರ್ಯನ ದರ್ಶನವಿಲ್ಲದೆ ಜನರ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿದೆ.

ಶೀತ(Cold Air) ಗಾಳಿಯೂ ಬೀಸುತ್ತಿದೆ. ಹೀಗಾಗಿ ಹಿರಿಯರು, ಮಕ್ಕಳ ಆರೋಗ್ಯದ(Health) ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ವ್ಯಾಪಾರ, ವಹಿವಾಟಿನ ಮೇಲೆಯೂ ಪರಿಣಾಮ ಬೀರಿದೆ. ಸಣ್ಣಪುಟ್ಟ ಅಂಗಡಿಗಳು, ಹೋಟೆಲ್ ಗಳು, ಬೀದಿ ಬದಿ ವ್ಯಾಪಾರಿಗಳು ಗಿರಾಕಿಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತಾಪಿ ವರ್ಗದಲ್ಲಿಯೂ ಒಂದಿಷ್ಟು ಸಮಸ್ಯೆಯಾಗಿದೆ. ಇನ್ನು ಒಂದೆರಡು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆದರೆ ಏನು ಮಾಡೋದು ಎನ್ನುವ ಚಿಂತೆ ಎಲ್ಲರನ್ನು ಕಾಡುತ್ತಿದೆ.

WhatsApp Group Join Now
Telegram Group Join Now
Share This Article