ಪ್ರಜಾಸ್ತ್ರ ಸುದ್ದಿ
ವಾಷಿಂಗ್ಟನ್: ಅಮೆರಿ, ಇರಾನ್, ಇಸ್ರೇಲ್ ನಡುವಿನ ಯುದ್ಧದಿಂದಾಗಿ ಜಾಗತಿಕವಾಗಿ ಇಂಧನ ದರ ಹೆಚ್ಚಳವಾಗುತ್ತಿದೆ. ಹೀಗಾಗಿ ಸಮುದ್ರದಲ್ಲಿ ಸಿಲುಕಿರುವ ಇರಾನ್ ತೈಲದ ಮೇಲಿನ ನಿರ್ಬಂಧವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಅಮೆರಿಕ ಶುಕ್ರವಾರ ಹೇಳಿದೆ. ಇದರಿಂದಾಗಿ ಇರಾನ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಲು ಅವಕಾಶ ಕಲ್ಪಿಸಲಾಗಿದೆ.
ಇದು ಈಗಾಗ್ಲೇ ಸಮುದ್ರದಲ್ಲಿ ಸಾಗಾಟದಲ್ಲಿರುವ ತೈಲಗಳಿಗೆ ಮಾತ್ರ ಅವಕಾಶವಿದ್ದು, ಏಪ್ರಿಲ್ 19ರ ತನಕ ಜಾರಿಯಲ್ಲಿ ಇರಲಿದೆ ಎಂದು ಅಮೆರಿಕದ ಹಣಕಾಸು ಇಲಾಖೆಯ ಕಾರ್ಯದರ್ಶಿ ಸ್ಕಾಟ್ ಬೆಸ್ಟೆಂಟ್ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ 140 ಮಿಲಿಯನ್ ಗ್ಯಾರಲ್ ತೈಲ ಜಾಗತಿಕ ಮಾರಕಟ್ಟೆಗೆ ಬಿಡುಗಡೆಯಾಗಲಿದೆ. ಇದರಿಂದ ಇಂಧನದ ಬೇಡಿಕೆಯ ಒತ್ತಡ ಸ್ವಲ್ಪ ಕಡಿಮೆಯಾಗಲಿದೆ.




