ಪ್ರಜಾಸ್ತ್ರ ಸುದ್ದಿ
ಮೆಲ್ಬೋರ್ನ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ಗೆಲ್ಲುವ ಮೂಲಕ 15 ವರ್ಷಗಳ ನಂತರ ಆಸೀಸ್ ವಿರುದ್ಧ ಜಯ ಸಾಧಿಸಿದೆ. 5 ದಿನಗಳ ಟೆಸ್ಟ್ ಪಂದ್ಯ ಕೇವಲ 2 ದಿನದಲ್ಲಿ ಮುಗಿದಿದೆ. 4 ವಿಕೆಟ್ ಅಂತರದಿಂದ ಗೆಲುವು ಸಾಧಿಸುವ ಮೂಲಕ 3-1ರಲ್ಲಿ ಸರಣಿಯಾಗಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 152 ರನ್ ಗಳಿಸಿತ್ತು. ಇಂಗ್ಲೆಂಡ್ 110ಕ್ಕೆ ಆಲೌಟ್ ಆಯಿತು. ನಂತರ 2ನೇ ಇನ್ನಿಂಗ್ಸ್ ನಲ್ಲಿ ಆಸೀಸ್ 132 ರನ್ ಗಳಿಗೆ ಆಲೌಟ್ ಆಯಿತು. ಹೀಗಾಗಿ 175 ರನ್ ಟಾರ್ಗೆಟ್ ನೀಡಲಾಯಿತು. 6 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡ 178 ರನ್ ಗಳಿಸಿ 4 ವಿಕೆಟ್ ಅಂತರದಿಂದ ಜಯ ಸಾಧಿಸಿತು. ಇಂಗ್ಲೆಂಡ್ ತಂಡದ ಬೌಲರ್ ಜೋಶ್ ಟಂಗ್ ಪ್ಲೇಯರ್ ಆಫ್ ದ್ ಮ್ಯಾಚ್ ಆಗಿದ್ದಾರೆ. ಎರಡು ಇನ್ನಿಂಗ್ಸ್ ನಿಂದ 7 ವಿಕೆಟ್ ಪಡೆದಿದ್ದಾರೆ.




