ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕೂಡಲಸಂಗಮ ಪಂಚಮಸಾಲಿ ಗುರುಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮಿಗಳನ್ನು ಉಚ್ಛಾಟನೆ ಮಾಡಿರುವುದು ಖಂಡನೀಯ ಎಂದು ಸಮಾಜದ ತಾಲೂಕಾಧ್ಯಕ್ಷ ಎಂ.ಎಂ ಹಂಗರಗಿ ಹೇಳಿದ್ದಾರೆ. ಪಟ್ಟಣದ ಬಸವ ಮಂಟಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ವಿಜಯಾನಂದ ಕಾಶಪ್ಪನವರು ಗುರುಗಳಿಗೆ ಪೀಠದಿಂದ ಉಚ್ಚಾಟನೆ ಮಾಡಿ ಬಹಳ ಅವಮಾನ ಮಾಡಿದ್ದಾರೆ. ಮುಂದೆ ಸಮಾಜದ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಉದ್ಯಮ ಘಟಕದ ರಾಜ್ಯಾಧ್ಯಕ್ಷರಾದ ಶಿವರಾಜ ಪೊಲೀಸಪಾಟೀಲ(ಭಾಸಗಿ) ಮಾತನಾಡಿ, ಕಾಶಪ್ಪನವರು ಕಟ್ಟಿದ ಪೀಠ ಮತ್ತು ಟ್ರಸ್ಟ್ ಕುಟುಂಬದಾಗಿದೆ. ಅವರ ವೈಯಕ್ತಿಕ ಹಿತಾಸಕ್ತಿ ಸಲುವಾಗಿ ಪೀಠ ಮತ್ತು ಟ್ರಸ್ಟನ್ನು ಮಾಡಿರುತ್ತಾರೆ. ಕಾಶಪ್ಪನವರು ಮತ್ತು ಟ್ರಸ್ಟಿಗಳು ಶ್ರೀಗಳನ್ನು ಪೀಠದಿಂದ ಉಚ್ಚಾಟನೆ ಮಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ. ಗುರುಗಳ ಮೆಚ್ಚುಗೆ ಗಳಿಸಿ ಹಾಗೂ ಸಮಾಜದ ಪ್ರೀತಿ, ವಿಶ್ವಾಸದಿಂದ ಹುನಗುಂದದ ಶಾಸಕರಾಗುತ್ತಾರೆ. ಸುಮಾರು ಎರಡು ತಿಂಗಳ ಹಿಂದೆ ಕಾಶಪ್ಪನವರು ತಮ್ಮ ಬೆಂಬಲಿಗರನ್ನು ಹೇಳಿ ಪೀಠಕ್ಕೆ ಬೀಗ ಹಾಕಿದರು. ತಮ್ಮ ರಾಜಕೀಯಕ್ಕಾಗಿ ಸಮಾಜವನ್ನು ಬಲಿ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಂಗನಗೌಡ ಪಾಟೀಲ ಅಗಸಬಾಳ, ವಿ.ಬಿ ಕುರುಡೆ, ಆರ್.ಡಿ ದೇಸಾಯಿ, ಆನಂದ ಶಬಾದಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಶಿವಾನಂದ ಬಡಾನೂರ, ಚಂದ್ರಶೇಖರ ನಗರಬೆಟ್ಟ, ಶಂಕರ ಬಿರಾದಾರ, ದಾನಪ್ಪ ಜೋಗುರ, ಗುರಪ್ಪಣ್ಣ ಮಳ್ಳಿ, ಗುರಣ್ಣ ಶಾಪುರ, ದಾನೇಶ ಪರಂಪುರ, ಬಸವರಾಜ ಐರೋಡಗಿ ಸೇರಿ ಅನೇಕರು ಉಪಸ್ಥಿತರಿದ್ದರು.