ಪ್ರಜಾಸ್ತ್ರ ಸುದ್ದಿ
ಆಂಧ್ರಪ್ರದೇಶ(Andhra Pradesh): ತಂದೆ ತಾಯಿಗಳು ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬರೀ ಓದು, ಬರಹ ಎಂದು ಜೀವ ಹಿಂಡುತ್ತಿದ್ದಾರೆ. ಶಾಲೆ ಮುಗಿದ ಬಳಿಕ ಟ್ಯೂಷನ್, ಎಕ್ಸ್ ಟ್ರಾ ಕ್ಲಾಸ್ ಎನ್ನುತ್ತಿದ್ದಾರೆ. ಇದು ಸ್ಪರ್ಧಾತ್ಮಕ ಯುಗ ಎನ್ನುತ್ತಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊಬ್ಬ ತಂದೆ ಮಕ್ಕಳ ಜೀವವನ್ನೇ ತೆಗೆದು ತಾನು ಸಾವಿನ ದಾರಿ ಹಿಡಿದಿದ್ದಾನೆ. ಆಂಧ್ರಪ್ರದೇಶದ ತಾಡೇಪಲ್ಲಿಗುಡ್ಡೆ ನಿವಾಸಿ ವಾನಪಳ್ಳಿ ಚಂದ್ರಕಿಶೋರ್, ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
37 ವರ್ಷದ ವಾನಪಳ್ಳಿ ಚಂದ್ರಕಿಶೋರ್ ಒಎನ್ ಜಿಸಿ(ONGS) ಕಚೇರಿಯಲ್ಲಿ ಸಾಹಯಕ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಇತನ ಇಬ್ಬರು ಮಕ್ಕಳು ಓದಿನಲ್ಲಿ ಹಿಂದಿ ಇದ್ದು, ಇದಕ್ಕಾಗಿ ಮನೆಯಲ್ಲಿ ಆಗಾಗ ಜಗಳ ಮಾಡುತ್ತಿದ್ದನಂತೆ. ಹೋಳಿ ಹಬ್ಬದ ಹಿನ್ನಲೆ ಶುಕ್ರವಾರ ಪತ್ನಿ ಹಾಗೂ ಮಕ್ಕಳನ್ನು ಕಚೇರಿಗೆ ಕರೆದುಕೊಂಡು ಬಂದಿದ್ದಾನೆ. ನಂತರ ಇವರಿಗೆ ಬಟ್ಟೆ ಹೊಲಿಸಲು ಟೇಲರ್ ಬಳಿ ಹೋಗಿ ಬರುತ್ತೇನೆ ಎಂದು ಹೇಳಿ ಪತ್ನಿಯನ್ನು ಕಚೇರಿಯಲ್ಲಿ ಬಿಟ್ಟು ಮಕ್ಕಳೊಂದಿಗೆ ಮನೆಗೆ ಬಂದಿದ್ದಾನೆ.
ಹೀಗೆ ಮನೆಗೆ ಬಂದ ಚಂದ್ರಕಿಶೋರ್, ಮಕ್ಕಳ ಕೈ ಕಾಲುಗಳನ್ನು ಕಟ್ಟಿ ನೀರು ತುಂಬಿದ ಬಕೆಟ್ ನಲ್ಲಿ ತಲೆಯನ್ನು ಮುಳುಗಿಸಿ ಕೊಲೆ(Father Kills Sons) ಮಾಡಿದ್ದಾನೆ. ನಂತರ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ. ತುಂಬಾ ಹೊತ್ತಾದರೂ ಪತಿ ಬರದೆ ಇರುವುದಕ್ಕೆ ಪತ್ನಿ ಮನೆಗೆ ಬಂದಿದ್ದಾಳೆ. ನೋಡಿದರೆ ಪತಿ, ಮಕ್ಕಳು ಮೃತಪಟ್ಟಿದ್ದಾರೆ. ಆಕೆಗೆ ಬರಸಿಡಿಲು ಬಡಿದಂತಾಗಿದೆ. ಪೊಲೀಸರು ಮನೆ ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಸಿಕ್ಕಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಭವಿಷ್ಯವಿಲ್ಲ. ಹೀಗಾಗಿ ಮಕ್ಕಳನ್ನು ಕೊಂದು ನಾನು ಸಾಯುತ್ತಿದ್ದೇನೆ ಎಂದು ಬರೆದಿದ್ದಾನೆ ಎಂದು ಹೇಳಲಾಗುತ್ತಿದೆ. ಓದು ಬೇಕು ನಿಜ. ಆದರೆ ಓದೇ ಎಲ್ಲವೂ ಅಲ್ಲ ಅನ್ನೋದನ್ನು ತಿಳಿಯದ ವ್ಯಕ್ತಿ ಏನೂ ಅರಿಯದ ಮಕ್ಕಳನ್ನು ಕೊಂದು ತಾನು ಸಾವಿನ ಹಾದಿ ಹಿಡಿದಿರುವುದು ನಿಜಕ್ಕೂ ನೋವು ಹಾಗೂ ದುರಂತ.