ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandaya): ಮಗನ ಮಾತು ನಂಬಿ ಆತ ಹೇಳಿದಂತೆ ಕೇಳಿದ ತಂದೆ ಇದೀಗ ಮಗನೊಂದಿಗೆ ಜೈಲು ಸೇರಿದ ಘಟನೆ ನಡೆದಿದೆ. ಮಧುಸೂದನ್ ಎನ್ನುವ ಯುವಕ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದಾನೆ. ತಂದೆಗೆ ಫೋನ್ ಮಾಡಿ ಮಾತನಾಡಿ, ಮಳವಳ್ಳಿಯಲ್ಲಿ ನನ್ನ ಪರಿಚಿತನೊಬ್ಬ ಬಟ್ಟೆ ಬ್ಯಾಗ್ ಕೊಡುತ್ತಾನೆ. ತಂದು ಕೊಡು ಎಂದು ಹೇಳಿದ್ದಾನೆ. ಅದರಂತೆ ಅಪರಿಚಿತ ವ್ಯಕ್ತಿಯೊಂದು ಬ್ಯಾಗ್ ಪಡೆದು ಶಿವಣ್ಣ ಜೈಲಿಗೆ ಹೋಗಿ ಲಾಕ್ ಆಗಿದ್ದಾನೆ.
ಅಷ್ಟಕ್ಕೂ ಆಗಿದ್ದು ಏನಂದರೆ, ಮಗ ಬಟ್ಟೆ ಬ್ಯಾಗ್ ಹೇಳಿದ್ದಾನೆ. ಅದನ್ನು ಪಡೆದು ತಂದು ಕೊಡುತ್ತಿದ್ದೇನೆ ಎಂದುಕೊಂಡರೆ, ಬಟ್ಟೆಗಳ ಜೊತೆಗೆ 20 ಗ್ರಾಂ ಗಾಂಜಾ ಪತ್ತೆಯಾಗಿದೆ. ಕಾರಾಗೃಹದ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದಾಗ ಗಾಂಜಾ ಸಿಕ್ಕಿದೆ. ಇದರಿಂದ ತಂದೆಗೆ ಶಾಕ್ ಆಗಿದೆ. ಎನ್ ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತಂದೆಯನ್ನು ವಶಕ್ಕೆ ಪಡೆಯಲಾಗಿದೆ. ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲಲ್ಲಿದ್ದ ಮಗನ ಮಾತು ನಂಬಿ ತಂದೆ ಕಂಬಿ ಎಣಿಸುವಂತಾಗಿದೆ.