ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಮೊದಲ ಮಳೆಯ ಸಿಂಚನವಾಗಿದೆ. ಸಂಜೆಯಿಂದಲೇ ಮೋಡ ಮುಸುಕಿದ ವಾತಾವರಣ, ತಣ್ಣನೆಯ ಗಾಳಿ ಬೀಸುತ್ತಿತ್ತು. ರಾತ್ರಿ 9 ಗಂಟೆಯಿಂದ ಭರ್ಜರಿ ಮಳೆ ಸುರಿಯಲು ಪ್ರಾರಂಭಿಸಿತು. ಈಗಾಗಲೇ ಬೇಸಿಗೆ ಬಿಸಿಲಿನ ತಾಪ ಜೋರಾಗಿದ್ದು, ಜನರು ಹೈರಾಣಾಗಿದ್ದಾರೆ. ಹೀಗಾಗಿ ಭೂಮಿಯನ್ನು ಒಂದಿಷ್ಟು ತಂಪೆರೆದು ಜನರು ಸ್ವಲ್ಪ ನಿರಾಳವಾಗುವಂತೆ ಆಯ್ತು. ಪಟ್ಟಣದ ತಹಶೀಲ್ದಾರ್ ಕಚೇರಿ ಹತ್ತಿರ ಇರುವ ಬನ್ನಿ ಲಕ್ಷ್ಮಿದೇವಿ ಗುಡಿಯ ಹತ್ತಿರದ ಗಿಡವೊಂದು ಧರೆಗುರುಳಿದೆ. ಮಳೆಯಿಂದ ವಿದ್ಯುತ್ ಪೂರೈಕೆಯಲ್ಲಿ ಒಂದಿಷ್ಟು ಸಮಸ್ಯೆ ಕಾಡಿತು.