ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ(ಏಕನಾಥ್ ಶಿಂದೆ ಬಣ) ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಧನಂಜಯ್ ಮುಂಡೆ ರಾಜೀನಾಮೆ ಸಲ್ಲಿಸಿದ್ದಾರೆ. ಬೀಡ್ ಜಿಲ್ಲೆಯಲ್ಲಿ ನಡೆದ ಸರಪಂಚ್(Sarpanch) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡೆ ರಾಜೀನಾಮೆ ಸಲ್ಲಿಸಿದ್ದಾರೆ. ಸರಪಂಚ್ ಸಂತೋಷ್ ದೇಶಮುಖ್ ಹತ್ಯೆ ಪ್ರಕರಣದಲ್ಲಿ ಧನಂಜಯ್ ಮುಂಡೆ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುತ್ತಿದೆ. ಮುಂಡೆ ಸಹಾಯಕ ವಾಲ್ಮಿಕ್ ಕರಡ್ ಬಂಧನ ಬಳಿಕ, ಸಿಎಂ ಫಡ್ನಾವಿಸ್ ಮುಂಡೆ ರಾಜೀನಾಮೆ ಕೇಳಿದ್ದರು.
ಬೀಡ್ ಜಿಲ್ಲೆಯ ಮಸಾಜೋಗ್ ಗ್ರಾಮದ ಸರಪಂಚ್ ಸಂತೋಷ್ ದೇಶಮುಖ್ ಕಳೆದ ಡಿಸೆಂಬರ್ 9ರಂದು ಅಪಹರಣಕ್ಕೊಳಗಾಗಿ, ಶವವಾಗಿ ಪತ್ತೆಯಾಗಿದ್ದರು. ಇಂಧನ ಕಂಪನಿಗಳನ್ನು ಗುರಿಯಾಗಿಸಿ ನಡೆಯುತ್ತಿದ್ದ ಸುಲಿಗೆಯನ್ನು ತಡೆಯುವ ಪ್ರಯತ್ನದ ಕಾರಣಕ್ಕೆ ಈ ಕೊಲೆ(Murder) ನಡೆದಿದೆ ಎಂದು ಹೇಳಲಾಯಿತು. ಬೀಡ್ ನ ಕೇಜ್ ಪೊಲೀಸ್ ಠಾಣೆಯಲ್ಲಿ ಮೂರು ವಿಭಿನ್ನ ಪ್ರಕರಣಗಳು ದಾಖಲಾಗಿವೆ. ಸಿಐಡಿ ಕೋರ್ಟ್ ಗೆ 1,200 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಇಲ್ಲಿ ಮುಂಡೆ ಆಪ್ತ ಸಹಾಯಕ ವಾಲ್ಮಿಕ್ ಕರಡ್ ಪ್ರಾಥಮಿಕ ಆರೋಪಿಯಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಕಳೆದ ರಾತ್ರಿ ಸಿಎಂ ಫಡ್ನಾವಿಸ್, ಡಿಸಿಎಂ ಅಜಿತ್ ಪವಾರ್ ಚರ್ಚೆ ನಡೆಸಿದ್ದಾರೆ.