ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳುನಾಡು ಅಧಿವೇಶನ ಪ್ರಾರಂಭಕ್ಕೂ ಮೊದಲು ಸದನದಲ್ಲಿ ರಾಜ್ಯಪಾಲ ಆರ್.ಎನ್ ರವಿ ಅವರು ಭಾಷಣ ಮಾಡಬೇಕಿತ್ತು. ಆದರೆ, ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಓದಲು ನಿರಾಕರಿಸಿ ಹೊರ ನಡೆದಿದ್ದಾರೆ. ಈ ಮೂಲಕ ಸತತ 3ನೇ ಬಾರಿ ಭಾಷಣ ಮಾಡದೆ ಹೋಗಿದ್ದಾರೆ. ಕಳೆದ ಎರಡು ವರ್ಷವೂ ಅವರು ಸದನದಲ್ಲಿ ಭಾಷಣ ಮಾಡಿರಲಿಲ್ಲ.
ಸದನಕ್ಕೆ ಬಂದ ರಾಜ್ಯಪಾಲರನ್ನು ಸಭಾಪತಿ ಎಂ.ಅಪ್ಪಾವು ಅವರು ಸ್ವಾಗತಿಸಿದರು. ಆದರೆ, ವಿಧಾನಸಭೆ ಉದ್ದೇಶಿಸಿ ಭಾಷಣ ಮಾಡದೆ ಹೊರ ನಡೆದಿದ್ದಾರೆ. ನನಗೆ ನಿರಾಸೆಯಾಗಿದೆ. ರಾಷ್ಟ್ರಗೀತೆಗೆ ಸರಿಯಾದ ಗೌರವ ಸಿಗಲಿಲ್ಲ ಎಂದಿದ್ದಾರೆ. ರಾಜ್ಯಪಾಲರ ನಡೆಯನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಖಂಡಿಸಿದ್ದಾರೆ. ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಸಂಪ್ರದಾಯ ಉಲ್ಲಂಘಿಸಿದ್ದಾರೆ. ಸದನವನ್ನು ಅವಮಾನಿಸಿದ್ದಾರೆ ಅಂತಾ ಹೇಳಿದ್ದಾರೆ.




