Ad imageAd image

ಬೆಳಗಾವಿ: ರೈತರ ಪ್ರತಿಭಟನೆ ದಾಟಿದ ಬಸ್ ಚಾಲಕರ ಕೈ ಕಟ್ಟಿದ್ದರು

ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಶುರುವಾಗಿದೆ. ಮೊದಲ ದಿನವೇ ರೈತರ ಪ್ರತಿಭಟನೆ ಬಿಸಿ ತಟ್ಟಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸುವರ್ಣಸೌಧ

Nagesh Talawar
ಬೆಳಗಾವಿ: ರೈತರ ಪ್ರತಿಭಟನೆ ದಾಟಿದ ಬಸ್ ಚಾಲಕರ ಕೈ ಕಟ್ಟಿದ್ದರು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಶುರುವಾಗಿದೆ. ಮೊದಲ ದಿನವೇ ರೈತರ ಪ್ರತಿಭಟನೆ ಬಿಸಿ ತಟ್ಟಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸುವರ್ಣಸೌಧ ಮಾರ್ಗದ ಹಲಗಾ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ಇಬ್ಬರು ಸಾರಿಗೆ ಚಾಲಕರು ಪ್ರತಿಭಟನೆಕಾರರನ್ನು ದಾಟಿಕೊಂಡು ಮುಂದೆ ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರುನ್ನು ಓಡಿ ಹೋಗಿ ಎರಡು ಬಸ್ ಚಾಲಕರ ಕೈಗಳನ್ನು ಟವಲ್ ನಿಂದ ಸ್ಟೇರಿಂಗ್ ಗೆ ಕಟ್ಟಿ ಹಾಕಿದ್ದಾರೆ.

ಪ್ರತಿಭಟನೆ ವೇಳೆ ಹಲವು ವಾಹನಗಳು ಸಾಲುಗಟ್ಟಿ ನಿಂತಿವೆ. ಆದರೆ, ಎರಡು ಸಾರಿಗೆ ಬಸ್ ಗಳು ಪ್ರತಿಭಟನಾಕಾರರನ್ನು ದಾಟಿ ಮುಂದೆ ಹೋಗಿವೆ. ಇದರಿಂದ ಆಕ್ರೋಶಗೊಂಡ ರೈತರು ಬಸ್ ಗಳನ್ನು ತಡೆದು ತಮ್ಮ ಹಸಿರು ಟವಲ್ ನಿಂದ ಚಾಲಕ ಕೈ ಕಟ್ಟಿ ಹಾಕಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಳಸಾ-ಬಂಡೂರಿ ಯೋಜನೆ, ಕನಿಷ್ಠ ಬೆಂಬಲ ಬೆಲೆ, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವುದು, ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article