Ad imageAd image

ಕಂಚು ಗೆದ್ದು ತವರಿಗೆ ಬಂದ ಹಾಕಿ ಟೀಂ

ಪ್ಯಾರಿಸ್ ಒಲಿಂಪಿಕ್ಸ್-2024 ಟೂರ್ನಿಯಲ್ಲಿ ಭಾರತ ಹಾಕಿ ತಂಡ ಕಂಚು ಗೆಲ್ಲುವ ಮೂಲಕ ಪದಕದೊಂದಿಗೆ ತವರಿಗೆ ಮರಳಿದೆ.

Nagesh Talawar
ಕಂಚು ಗೆದ್ದು ತವರಿಗೆ ಬಂದ ಹಾಕಿ ಟೀಂ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New delhi): ಪ್ಯಾರಿಸ್ ಒಲಿಂಪಿಕ್ಸ್-2024(Paris Olympics-2024) ಟೂರ್ನಿಯಲ್ಲಿ ಭಾರತ ಹಾಕಿ(Hockey) ತಂಡ ಕಂಚು ಗೆಲ್ಲುವ ಮೂಲಕ ಪದಕದೊಂದಿಗೆ ತವರಿಗೆ ಮರಳಿದೆ. ಹರ್ಮನ್ ಪ್ರಿತ್ ಸಿಂಗ್ ನಾಯಕತ್ವದ ತಂಡ ಶನಿವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದೆ. ಅವರಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಈ ವೇಳೆ ಬ್ಯಾಂಡ್ ಬಾಜ್ ಬಾರಿಸಲಾಗಿದ್ದು, ಆಟಗಾರರು ಕುಣಿದು ಸಂಭ್ರಮಿಸಿದರು.

ನಾವು ಫೈನಲ್ ಪ್ರವೇಶಿಸಲು ಪ್ರಯತ್ನಿಸಿದವು. ಆದರೆ, ಸಾಧ್ಯವಾಗಲಿಲ್ಲ. ಹೀಗಾಗಿ ನಮ್ಮ ಕನಸು ನನಸಾಗಲಿಲ್ಲ. ಆದರೆ, ಬರಿಗೈಯಲ್ಲಿ ಬರದೆ ಪದಕದೊಂದಿಗೆ ಬಂದಿದ್ದೇವೆ ಎಂದು ನಾಯಕ ಹರ್ಮನ್ ಪ್ರಿತ್ ಸಿಂಗ್(Harmanpreet singh) ಹೇಳಿದರು. ನಮಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ, ಕೇಂದ್ರ ಸರ್ಕಾರ, ಒಡಿಶಾ ಸರ್ಕಾರಕ್ಕೆ ಧನ್ಯವಾದಗಳು ಎಂದರು.

WhatsApp Group Join Now
Telegram Group Join Now
Share This Article