ಪ್ರಜಾಸ್ತ್ರ ಸುದ್ದಿ
ಕೋಲ್ಕತ್ತಾ(kolkata): ಆರ್.ಜಿ ಕರ್ ವೈದ್ಯಕೀಯ(kolkata doctor case)ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ,(Rape and Murder) ಕೊಲೆ ಪ್ರಕರಣದ ಮರಣೋತ್ತರ(Posthumous Report) ಪರೀಕ್ಷೆ ವರದಿ ಬಹಿರಂಗವಾಗಿದೆ. ಇದರಲ್ಲಿ ಭಯಾನಕ ಅಂಶಗಳು ಬೆಳಕಿಗೆ ಬಂದಿವೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಬಳಿಕ ಕೈಗಳಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ದೇಹದ ಮೇಲೆ 16 ಗಾಯಗಳಿವೆ. ದೇಹದೊಳಗೆ 9 ಗಾಯಗಳಿವೆ. ಜನನಾಂಗದ ಮೇಲೆ ಬಲವಂತದ ಗಾಯ ಮಾಡಲಾಗಿದೆ. ಕೃತ್ಯದ ಹಿಂದೆ ಒಂದಕ್ಕಿಂತ ಹೆಚ್ಚಿನ ಜನರ ಕೈವಾಡವಿದೆ ಎಂದು ತಿಳಿದು ಬಂದಿದೆ.
ಆಗಸ್ಟ್ 9ರಂದು ಈ ಘಟನೆ ನಡೆದಿದ್ದು, ದೇಶ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಸುಪ್ರೀಂ(Supreme Court) ಕೋರ್ಟ್ ಸಹ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೊಂದು ಭಯಾನಕ ಕೃತ್ಯವೆಂದು ಸುಪ್ರೀಂ ಕೋರ್ಟ್ ಹೇಳಿದೆ. ವೈದ್ಯರು ಹಾಗೂ ಆರೋಗ್ಯ ಸೇವೆ ನೀಡುವ ಇತರೆ ವೃತ್ತಿಪರರ ಸುರಕ್ಷತೆಗೆ ನಿಯಮಗಳನ್ನು ರೂಪಿಸುವ ಸಂಬಂಧ 10 ಜನರ ಸಮಿತಿ ರಚಿಸಲಾಗಿದೆ. ಮೂರು ವಾರಗಳಲ್ಲಿ ಮಧ್ಯಂತರ ವರದಿ, 2 ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸಬೇಕಿದೆ.
ಈ ಪ್ರಕರಣದಲ್ಲಿ ಪಶ್ಚಿಮ ಬಂಗಾಳ(West Bengal) ಸರ್ಕಾರ ವಿಫಲವಾಗಿದೆ ಎಂದು ಕಿಡಿ ಕಾರಲಾಗುತ್ತಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದ್ದಾಗ ಅದನ್ನು ದುರುದ್ದೇಶದಿಂದ ಹಿಂಸಾರೂಪಕ್ಕೆ ತಿರುಗಿಸಲು ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿದೆ. ಕೃತ್ಯ ನಡೆದ ಜಾಗವನ್ನು ಇದೀಗ ನವೀಕರಣಗೊಳಿಸಲು ಮುಂದಾಗುವ ಮೂಲಕ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡಿರುವುದಕ್ಕೂ ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿದೆ. ಅತ್ಯಾಚಾರ ಸಂಬಂಧ ಕಠಿಣ ಕಾನೂನುಗಳನ್ನು ತಂದರೂ ಕೃತ್ಯಗಳು ನಿಲ್ಲುತ್ತಿಲ್ಲ. ಇದಕ್ಕೆ ತನಿಖೆ, ಶಿಕ್ಷೆಯ ವಿಳಂಬ ಇರಬಹುದೇ ಅನ್ನೋ ಪ್ರಶ್ನೆ ಮೂಡಿದೆ.