ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ರಾಜ್ಯ ಕಾಂಗ್ರೆಸ್ ಸರ್ಕಾರ ಹಗರಣಗಳ ವಿರುದ್ಧ ಬಿಜೆಪಿ-ಜೆಡಿಎಸ್(BJP-JDS) ಜಂಟಿಯಾಗಿ ಮೈಸೂರು ಚಲೋ ಪಾದಯಾತ್ರೆಯನ್ನು ಶನಿವಾರದಿಂದ ಶುರು ಮಾಡಿದ್ದಾರೆ. ಆದರೆ, ಮೂರೇ ದಿನಕ್ಕೆ ಮಂಕಾದಂತೆ ಕಾಣುತ್ತಿದೆ. ಯಾಕಂದರೆ ಜೆಡಿಎಸ್ ನಾಯಕರು ಪಾದಯಾತ್ರೆ ಶುರುವಾಗಬೇಕಾಗಿದ್ದ ಜಾಗಕ್ಕೆ ಇದುವರೆಗೂ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೆಂಗಲ್ ನಲ್ಲಿರುವ ಆಂಜನೇಯ ದೇವಸ್ಥಾನದಿಂದ ಮುಂಜಾನೆ 9.30ಕ್ಕೆ ಪಾದಯಾತ್ರೆ ಶುರುವಾಗಬೇಕಿತ್ತು. ಹೀಗಾಗಿ ಬಿಜೆಪಿ ನಾಯಕರು ಅಲ್ಲಿಗೆ ಬಂದಿದ್ದರೆ ಜೆಡಿಎಸ್ ನಾಯಕರು ಸುಳಿವು ಮಾತ್ರವಿಲ್ಲ. ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ಇತರೆ ಬಿಜೆಪಿ ನಾಯಕರು ಮುಂಜಾನೆಯ ಬಂದಿದ್ದಾರೆ. ಆದರೆ, ಹೆಚ್ಡಿಕೆ, ನಿಖಿಲ್ ಸೇರಿ ಇತರೆ ಜೆಡಿಎಸ್ ನಾಯಕರಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ.