ಪ್ರಜಾಸ್ತ್ರ ಸುದ್ದಿ
ಚೆನ್ನೈ(Channai): ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೋಲು ಬೆನ್ನು ಬಿಡದೆ ಕಾಡುತ್ತಿದೆ. ಶುಕ್ರವಾರ ಸಂಜೆ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಈ ಮೂಲಕ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಋತುರಾಜ್ ಗಾಯಕ್ವಾಡ ಗಾಯದಿಂದ ಹೊರಗುಳಿದ ಪರಿಣಾಮ ಧೋನಿ ನಾಯಕತ್ವದಲ್ಲಿ ಪಂದ್ಯ ಆಡಲಾಯಿತು. ಕೆಕೆಆರ್ ತಂಡದ ನಾಯಕ ಅಜಿಂಕೆ ರಹಾನೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಲೆಕ್ಕಾಚಾರವನ್ನು ಬೌಲರ್ ಗಳು ಸಾಬೀತು ಮಾಡಿದರು.
ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡದ ಆಟಗಾರರು ಸಂಪೂರ್ಣ ವೈಫಲ್ಯ ಎದುರಿಸಿದರು. ರಚಿನ್ ರವೀಂದ್ರ, ಕಾನ್ವೆ ವೈಫಲ್ಯ ಮುಂದುವರೆದಿದೆ. ರಾಹುಲ್ ತ್ರಿಪಾಠಿ 16, ವಿಜಯ್ ಶಂಕರ್ 29, ಶಿವಂ ದುಬೆ ಅಜೇಯ 31 ರನ್ ಬಿಟ್ಟರೆ ಎಲ್ಲರೂ ಹೀಗೆ ಬಂದು ಹಾಗೇ ಹೋದರು. ಅಶ್ವಿನ್ 1, ಜಡೇಜಾ 0, ದೀಪಕ್ ಹೂಡಾ 0, ನಾಯಕ ಧೋನಿ 1, ನೂರ್ ಅಹ್ಮದ್ 1, ಕಂಬೋಜಾ ಅಜೇಯ 3 ರನ್ ಗಳಿಸಿದರು. ನಾಯಕ ಧೋನಿ 9 ವಿಕೆಟ್ ಗೆ ಬರುವ ಮೂಲಕ ಮತ್ತೆ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ.
ಸುನಿಲ್ ನರೈನ್ ಅದ್ಬುತ ಬೌಲಿಂಗ್ ಮಾಡಿದರು. 4 ಓವರ್ ಗಳಲ್ಲಿ 13 ರನ್ ಕೊಟ್ಟು 3 ವಿಕೆಟ್ ತೆಗೆದರು. ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು. ಮೊಯಿನ್ ಅಲಿ, ವೈಭವ್ ಅರೋರ್ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ ಸಿಎಸ್ಕ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 103 ರನ್ ಗಳಿಸಿತು. ಇದು 2025ನೇ ಐಪಿಎಲ್ ನ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಈ ಅಲ್ಪ ಗುರಿಯನ್ನು ಸಿಎಸ್ಕೆ 2 ವಿಕೆಟ್ ಕಳೆದುಕೊಂಡು 10.1 ಓವರ್ ಗಳಲ್ಲಿ ಮುಗಿಸಿತು. ಡಿಕಾಕ್ 23, ಸುನಿಲ್ ನರೈನ್ ಭರ್ಜರಿ ಬ್ಯಾಟಿಂಗ್ ಮೂಲಕ 18 ಬೌಲ್ ಗಳಲ್ಲಿ 44 ರನ್ ಬಂದವು. ನಾಯಕ ರಹಾನೆ ಅಜೇಯ 20, ರಿಂಕು ಸಿಂಗ್ ಅಜೇಯ 15 ರನ್ ಗಳಿಸಿದರು. ಸಿನಿಲ್ ನರೈನ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
ಸಿಎಸ್ಕ್ 6 ಪಂದ್ಯಗಳಲ್ಲಿ 5 ರಲ್ಲಿ ಸೋತು 9ನೇ ಸ್ಥಾನದಲ್ಲಿದೆ. ಹೈದ್ರಾಬಾದ್ 5 ರಲ್ಲಿ 4 ಸೋತು 10ನೇ ಸ್ಥಾನದಲ್ಲಿದೆ. ಗುಜರಾತ್ ಟೈಟನ್ಸ್ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು ಟಾಪ್ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 4 ಪಂದ್ಯಗಳನ್ನು ಗೆದ್ದು 2ನೇ ಸ್ಥಾನ, ಕೆಕೆಆರ್ 3, ಆರ್ ಸಿಬಿ 4ನೇ ಸ್ಥಾನದಲ್ಲಿದೆ. ಪಂಜಾಬ್ 5, ಲಕ್ನೋ 6, ರಾಜಸ್ಥಾನ 7, ಮುಂಬೈ 8ನೇ ಸ್ಥಾನದಲ್ಲಿದೆ.