ಪ್ರಜಾಸ್ತ್ರ ಸುದ್ದಿ
ಹಾಸನ(Hasana): ಆಟೋ ಚಾಲಕನನ್ನು ಹತ್ಯೆ ಮಾಡಿ ನಂತರ ಅದನ್ನು ವಿಡಿಯೋ ಮಾಡಿ ಆತನ ಸಹೋದರನಿಗೆ ಕಳಿಸಿದ ಘಟನೆ ನಗರದಲ್ಲಿ ನಡೆದಿದೆ. ಹೂವಿನಹಳ್ಳಿ ಕಾವಲಿನ ಕೀರ್ತಿ(24) ಕೊಲೆಯಾದ ಯುವಕನಾಗಿದ್ದಾನೆ. ಚನ್ನಪಟ್ಟಣ-ಬಿಟ್ಟಗೌಡನಹಳ್ಳಿ ಜಂಕ್ಷನ್ ಹತ್ತಿರದ ಕೋಳಿಫಾರಂ ಹಿಂದೆ ಕೊಲೆ ಮಾಡಲಾಗಿದೆ.
ಆಲೂರು ತಾಲೂಕಿನ ದೊಡ್ಡ ಕುಣಗಲ್ ಗ್ರಾಮದ ಉಲ್ಲಾಸ್ ಕೊಲೆಯ ಪ್ರಮುಖ ಆರೋಪಿಯಾಗಿದ್ದಾನೆ. ಆಟೋ ಚಾಲಕರಿಬ್ಬರ ನಡುವೆ ಸೋಮವಾರ ಸಂಜೆ ಗಲಾಟೆಯಾಗಿದೆ. ಬಳಿಕ ಮತ್ತೊಂದು ಗುಂಪು ಕೀರ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದೆ. ನಂತರ ಇದನ್ನು ವಿಡಿಯೋ ಕೊಲೆಯಾದ ಯವಕನ ಸಹೋದರನಿಗೆ ಕಳಿಸಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




