ಪ್ರಜಾಸ್ತ್ರ ಸುದ್ದಿ
ಜಮ್ಮು ಮತ್ತು ಕಾಶ್ಮೀರ(Jammu and Kashmir): ಅಮಾಯಕ 7 ಜನರನ್ನು ಭಾನುವಾರ ಉಗ್ರರರು(Terrorist) ಹತ್ಯೆ ಮಾಡಿದ್ದಾರೆ. ಇದರ ಹೊಣೆಯನ್ನು ಪಾಕಿಸ್ತಾನದ ಟಿಆರ್ ಎಫ್ ಸಂಘಟನೆ ಹೊತ್ತುಕೊಂಡಿದೆ. ಇದರ ನಡುವೆ ಸೋಮವಾರ ಮುಂಜಾನೆ ಬಾರಾಮುಲ್ಲಾದಲ್ಲಿ ಉಗ್ರನೊಬ್ಬನನ್ನು ಹೊಡೆದುರುಳಿಸಿದ್ದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.
ಈ ವೇಳೆ ಎಕೆ ಸರಣಿಯ(AK Rifle) ರೈಫಲ್, ಎರಡು ಮ್ಯಾಗಜಿನ್, ಎಕೆ 57 ಗುಂಡುಗಳು, 2 ಪಿಸ್ತೂಲ್, 3 ಪಿಸ್ತೂಲ್ ಮ್ಯಾಗಜಿನ್ ಸೇರಿದಂತೆ ಅಪಾರ ಪ್ರಮಾಣದ ಮದ್ದು ಗಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಭಾನುವಾರ ನಿರಾಯುಧ ಸಾರ್ವಜನಿಕರ ಮೇಲೆ ದಾಳಿ ಮಾಡಿ 7 ಜನರನ್ನು ಹತ್ಯೆ ಮಾಡಲಾಗಿದೆ. ಕಾಶ್ಮೀರ್ ಹಾಗೂ ಕಾಶ್ಮೀರೇತರರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ.