Ad imageAd image

ಕೋರೇಗಾಂವ್ ಹೋರಾಟ ಶೋಷಣೆಯ ವಿರುದ್ಧ ನಡೆದ ಹೋರಾಟ: ಡಿ.ಪ್ರೇಮ್ ಕುಮಾರ್

Nagesh Talawar
ಕೋರೇಗಾಂವ್ ಹೋರಾಟ ಶೋಷಣೆಯ ವಿರುದ್ಧ ನಡೆದ ಹೋರಾಟ: ಡಿ.ಪ್ರೇಮ್ ಕುಮಾರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೆ.ಆರ್.ಪೇಟೆ(KR Pete): ಕೋರೇಗಾಂವ್ ಹೋರಾಟ ವಿದ್ಯೆ, ಸಮಾನತೆ, ಸ್ವಾಭಿಮಾನ, ಆತ್ಮಗೌರವಕ್ಕಾಗಿ ಹೋರಾಡಿ ಜಯಗಳಿಸಿದ ಘಟನೆ. ವಿದ್ಯೆ, ಅಸಮಾನತೆ ಹಾಗೂ ಶೋಷಣೆಯ ವಿರುದ್ಧ ನಡೆದ ಹೋರಾಟ. ಇತಿಹಾಸ ಪುಸ್ತಕಗಳಿಂದ ಮುಚ್ಚಿಡಲ್ಪಟ್ಟಿದ್ದ ಐತಿಹಾಸಿಕ ಯುದ್ಧದ ವಿಜಯವನ್ನು ಸಂಭ್ರಮಿಸೋಣ ಎಂದು ಪುರಸಭೆ ಸದಸ್ಯ ಡಿ.ಪ್ರೇಮ್ ಕುಮಾರ್ ತಿಳಿಸಿದರು. ಪಟ್ಟದ ಪ್ರವಾಸಿ ಮಂದಿರದಲ್ಲಿ ಕೆ.ಆರ್.ಪೇಟೆ ಛಲವಾದಿ ಮಹಾಸಭಾ ವತಿಯಿಂದ ಕೋರೇಗಾಂವ್ ವಿಜಯ ಸ್ಥಂಭ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚಿ ಮಾತನಾಡಿದರು.

1818 ರಲ್ಲಿ ನೂರಾರು ಮಹರ್ ಸೈನಿಕರು 28,000 ಸಾವಿರ ಪೇಶ್ವೆಗಳೊಂದಿಗೆ ಅಂದರೆ 2ನೇ ಬಾಜೀರಾಯನ ಸೈನ್ಯವನ್ನು ಮಣಿಸಿ ವಿಜಯ ಸಾಧಿಸಿದ ಆ ಯುದ್ಧದಲ್ಲಿ 22 ವೀರ ಸೇನಾನಿಗಳು ಮೃತರಾದ ಹಿನ್ನೆಲೆ ಅವರ ಸ್ಮರಣಾರ್ಥ ಕೋರೆಗಾಂವ್ ನಲ್ಲಿ 75 ಅಡಿ ಎತ್ತರ ಸ್ಥಂಭ ನಿರ್ಮಿಸಲಾಗಿದೆ. ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರು ವಿದೇಶದಲ್ಲಿ ವ್ಯಾಸಂಗ ಮಾಡುವಾಗ ಅಲ್ಲಿನ ಪುಸ್ತಕಗಳನ್ನು ಓದಿ ಭಾರತದಲ್ಲಿ ನಡೆದ ನೈಜ ಇತಿಹಾಸ ಗುರುತಿಸಿದರು. ಈ ನೈಜ ಇತಿಹಾಸ ಈಗಿನ ಯುವ ಪೀಳಿಗೆ ತಿಳಿಸಬೇಕಾಗಿದೆ ಎಂದ ಅವರು, ಈ ಕೋರೇಗಾಂವ್ ಯುದ್ಧವು ಅಸ್ಪೃಶ್ಯರ ಹೋರಾಟದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿ ಸ್ಫೂರ್ತಿಯ ಸಂಕೇತವಾದ್ದರಿಂದ ಅಂಬೇಡ್ಕರ್ ಅವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಜನವರಿ 1 ರಂದು ಮಾತ್ರ ಕೋರೇಗಾಂವ್ ನಲ್ಲಿರುವ ವಿಜಯ ಸ್ಥಂಬಕ್ಕೆ ಬಂದು ಗೌರವ ಸಮರ್ಪಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಾವು ಕೋರೇಗಾಂವ್ ವಿಜಯೋತ್ಸವ ಆಚರಿಸುತ್ತಿದ್ದೇವೆ  ಎಂದು ತಿಳಿಸಿದರು.

ಚಲವಾದಿ ಮಹಾಸಭಾ ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಉಚನಹಳ್ಳಿ ನಟರಾಜು ಮಾತನಾಡಿ, ಪ್ರತಿವರ್ಷ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಶೋಷಿತ ಸಮುದಾಯ ಮೌಢ್ಯತೆಯಿಂದ ಹೊರಬಂದಿಲ್ಲ. ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ಸೋಮಸುಂದರ್, ಛಲವಾದಿ ಮಹಾ ಸಭಾದ ರಾಜ್ಯ ಉಸ್ತುವಾರಿ ಮಾಂಬಳ್ಳಿ ಜಯರಾಮ್, ಕರ್ನಾಟಕ ರಕ್ಷಣ ಸ್ವಾಭಿಮಾನಿ ಸೇನಾ ಜಿಲ್ಲಾ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ಕಾಂತರಾಜು, ತಾಲ್ಲೂಕು ಅಧ್ಯಕ್ಷ ಸಮೀರ್, ದಲಿತ ಯುವ ಮುಖಂಡ ಹರಿಹರಪುರ ನರಸಿಂಹ, ಬೆಮ್ಮನಹಳ್ಳಿ ವೀರಭದ್ರ, ಆಲಂಬಾಡಿ ಕಾವಲು ಚನ್ನಕೃಷ್ಣ, ಐಪನಹಳ್ಳಿ ರವಿ, ತೆಂಡೆಕೆರೆ ಶಿವಕುಮಾರ್, ಶಂಕರ್ ಕಳೆನಹಳ್ಳಿ, ರವಿ ಕಾಗೆಪುರ, ಬಲ್ಲೇನಹಳ್ಳಿ ಯೋಗೇಶ್, ಬೂಕನಕೆರೆ ತಮ್ಮಯ್ಯ, ಮಾಕವಳ್ಳಿ ರಮೇಶ್, ಚಟ್ಟೆನಹಳ್ಳಿ ರಾಮ, ಮುದುಗೆರೆ ಮಹೇಂದ್ರ, ಬಸ್ತಿ ಪ್ರದೀಪ್ ಕುಮಾರ್, ಚಿಕ್ಕಗಾಡಿಗನಹಳ್ಳಿ ಬಸವರಾಜು, ಮೆಣಸ ಬಾಲು, ಚಿಕ್ಕಗಾಡಿಗನಹಳ್ಳಿ ಶ್ರೀಧರ್, ಯೊಗೇಂದ್ರ ವಿವೇಕ್, ಐಪನಹಳ್ಳಿ ಶೃತಿ ರವಿಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article