ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಜೈಲಿ ಸೇರಿರುವ ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳ ಟ್ರಯಲ್ ಗೆ ಸಂಬಂಧಿಸಿದಂತೆ 64ನೇ ಸಿಸಿಹೆಚ್ ನ್ಯಾಯಾಲಯ ದಿನಾಂಕ ನಿಗದಿಯನ್ನು ಇಂದು ಮಾಡುವುದಿತ್ತು. ಆದರೆ, ದರ್ಶನ್ ಹಾಗೂ ಇತರೆ ಆರೋಪಿಗಳ ಪರ ವಕೀಲರು ದಾಖಲೆಗಳ ಅಧ್ಯಯನ ಹಾಗೂ ವಾದ ಮಂಡನೆಗೆ ಸಮಯ ಕೇಳಿದೆ. ಹೀಗಾಗಿ ನವೆಂಬರ್ 19ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಪ್ರಾಸಿಕ್ಯೂಷನ್ ಪರ ವಕೀಲರಾದ ಪ್ರಸನ್ನಕುಮಾರ್ ಅವರು ಉದ್ದೇಶಪೂರ್ವಕವಾಗಿ ವಿಚಾರಣೆಯನ್ನು ವಿಳಂಬ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ 6 ತಿಂಗಳೊಳಗಾಗಿ ವಿಚಾರಣೆ ಮುಗಿಸಬೇಕು. ಈ ಸಂಬಂಧ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದರು. ಕಳೆದ ವಾರ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಸಾಕ್ಷಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಬೇಕಿದೆ.
ಇಂದು ನಟ ದರ್ಶನ್ ಸೇರಿ 6 ಆರೋಪಿಗಳು ಜೈಲಿನಿಂದ ವಿಡಿಯೋ ಕಾನ್ಪ್ ರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. ಉಳಿದ ಆರೋಪಿಗಳು ಕೋರ್ಟ್ ಹಾಜರದರು. ಆರೋಪಿಗಳ ಪರ ವಕೀಲರು ಕಾಲಾವಕಾಶ ಕೇಳಿದ್ದಾರೆ.




