ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಡಾ(MUDA) ಅಕ್ರಮ, ವಾಲ್ಮೀಕಿ(Valmiki nigagama) ನಿಗಮ ಹಗರಣದ ವಿರುದ್ಧ ಬಿಜೆಪಿ ಮೈಸೂರು ತನಕ ಪಾದಯಾತ್ರೆ ಹಮ್ಮಿಕೊಂಡಿದೆ. ಇದಕ್ಕೆ ಮೈತ್ರಿ ಪಕ್ಷವಾದ ಜೆಡಿಎಸ್ ನಾಯಕರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ಸ್ವಪಕ್ಷೀಯ ನಾಯಕರ ಜೊತೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HDK) ಸಹ ಪಾದಯಾತ್ರೆಯಿಂದ ದೂರ ಉಳಿದಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿಲ್ಲ, ಇದು ಬಿಜೆಪಿಯ ಏಕಪಕ್ಷೀಯ ನಿರ್ಧಾರವೆಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಒಳಜಗಳದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್(Congress), ಮೈತ್ರಿಗೆ ಬಿತ್ತು ಕತ್ರಿ. ಪಾದಯಾತ್ರೆಯು ಬಿಜೆಪಿ ಹಾಗೂ ಜೆಡಿಎಸ್(BJP-JDS) ಮೈತ್ರಿಯ ಅಂತಮಯಾತ್ರೆಗೆ ನಾಂದಿ ಹಾಡಲಿದೆ ಎಂದು ಬರೆಯಲಾಗಿದೆ. ಬಿಜೆಪಿಯ ಪಾದಯಾತ್ರೆ ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿಯರ ಬುಡ ಅಲ್ಲಾಡಿಸಲು ಸೃಷ್ಟಿಯಾದ ನಾಟಕ ಎನ್ನುವುದು ಜೆಡಿಎಸ್ ಪಕ್ಷಕ್ಕೆ ಈಗ ಅರ್ಥವಾದಂತಿದೆ. ಮತ್ತೊಂದೆಡೆ ಕುಮಾರಸ್ವಾಮಿಯವರು ಮಗ್ಗಲು ಮುಳ್ಳಾಗಿ ಕಾಡಲು ಶುರು ಮಾಡಿದ್ದಾರೆ. ಅಂದಹಾಗೆ ಈ ಪಾದಯಾತ್ರೆ ಪಾಲಿಟಿಕ್ಸ್ ನಲ್ಲಿ ಯಾರ ಕಾಲನ್ನು ಯಾರು ಎಳೆಯುವುದರಲ್ಲಿ ಯಶಸ್ವಿಯಾಗುತ್ತಾರೆ ಎಂಬುವುದು ಕಾಲವೇ ಬಹಿರಂಗಪಡಿಸಲಿದೆ ಎಂದು ಬರೆಯಲಾಗಿದೆ.