ಪ್ರಜಾಸ್ತ್ರ ಸದ್ದಿ
ಸಿಂದಗಿ(Sindagi): ಈಗಾಗ್ಲೇ ಕೋಟ್ಯಾಂತರ ರೂಪಾಯಿ ನಷ್ಟದಲ್ಲಿರುವ ಬ್ಯಾಂಕಿನಲ್ಲಿ ದುಂದುವೆಚ್ಚ ಯಾಕೆಂದು ಸಿಂದಗಿ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ಸದಸ್ಯರು ವ್ಯವಸ್ಥಾಪಕ ವೈ.ಎನ್ ಅಥರ್ಗಾ ಅವರನ್ನು ಪ್ರಶ್ನಿಸಿದರು. ಗುರುವಾರ ಪಟ್ಟಣದ ಬಸವ ಮಂಟಪದಲ್ಲಿ ನಡೆದ 59ನೇ ವಾರ್ಷಿಕ ಮಹಾಸಭೆ ನಡೆಯಿತು. ಈ ವೇಳೆ ಬ್ಯಾಂಕ್ ನಲ್ಲಿರುವ ರೈತಾಪಿ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ಸಭೆಗೆ ಸಂಬಂಧಿಸಿದಂತೆ ನಮಗೆ ನೋಟಿಸ್ ಬಂದಿಲ್ಲ ಎಂದು ಅನೇಕರು ಹೇಳಿದರು.
ಸಾಲ ವಸೂಲಿ ವೆಚ್ಚ ಸಹ ಹೆಚ್ಚಾಗುತ್ತಲೇ ಹೋಗುತ್ತಿದೆ. ಸಭೆಗೆ ಸಂಬಂಧಿಸಿದಂತೆ ಸದಸ್ಯರಿಗೆ ನೋಟಿಸ್ ಕಳಿಸಲು ಎಷ್ಟು ಖರ್ಚು ಮಾಡುತ್ತೀರಿ. ಒಬ್ಬರಿಗೆ ನೋಟಿಸ್ ಕಳಿಸಲು ಆಗುವ ಖರ್ಚು ಎಷ್ಟು ಅನ್ನೋದು ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಶ್ನಿಸಿ, ಮೊದಲೇ ನಷ್ಟದಲ್ಲಿರುವ ಬ್ಯಾಂಕ್ ಈ ರೀತಿ ಮಾಡಿದರೆ ಮುಚ್ಚಿಕೊಂಡು ಹೋಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದ ವ್ಯವಸ್ಥಾಪಕರು ಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳೆಂದು 27 ಅಂಶಗಳನ್ನು ಓದಿದರು. ಈ ವೇಳೆ ಎಂ.ಎಸ್ ಪಾಟೀಲ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್ ವಿಶೇಷಾಧಿಕಾರಿ ಎಂ.ಎಸ್ ರಾಠೋಡ, ಶಿವಪ್ಪಗೌಡ ಬಿರಾದಾರ, ಬಿ.ಎನ್ ಪಾಟೀಲ, ಚಂದ್ರಶೇಖರ ದೇವರೆಡ್ಡಿ, ಯಶವಂತರಾಯಗೌಡ ರೂಗಿ, ಈರಣ್ಣ ಕೆರಟುಗಿ(ಇಂಗಳಗಿ) ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು.