Ad imageAd image

ವಿದ್ಯಾರ್ಥಿಗೆ ಕಂಡೆಕ್ಟರ್ ಒದ್ದ ಆರೋಪ: ಸಾರಿಗೆ ಸಚಿವರು ಹೇಳಿದ್ದೇನು?

Nagesh Talawar
ವಿದ್ಯಾರ್ಥಿಗೆ ಕಂಡೆಕ್ಟರ್ ಒದ್ದ ಆರೋಪ: ಸಾರಿಗೆ ಸಚಿವರು ಹೇಳಿದ್ದೇನು?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಶಾಲಾ ವಿದ್ಯಾರ್ಥಿಯೊಬ್ಬನಿಗೆ ಬಿಎಂಟಿಸಿ ಬಸ್ ಕಂಡೆಕ್ಟರ್ ಒದ್ದ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಘಟನೆಯ ಸತ್ಯಾಸತ್ಯತೆ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬಿಎಂಟಿಸಿಯ ಕೆಎ 57 ಎಫ್ 3364 ನಂಬರ್ ನ ಬಸ್ಸಿನಲ್ಲಿ ವಿದ್ಯಾರ್ಥಿ ಹತ್ತಿಕೊಂಡಿದ್ದಾನೆ. ಈ ಬಸ್ಸಿನ ನಿರ್ವಾಹಕ ವಿದ್ಯಾರ್ಥಿಗೆ ಒದ್ದಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ನಿತ್ಯ 40 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಇದರಲ್ಲಿ 1.60 ಲಕ್ಷ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
Share This Article