Ad imageAd image

ಉದ್ಯಾನ ಜಾಗ ಒತ್ತುವರಿ ಆರೋಪಕ್ಕೆ ಪುರಸಭೆ ಅಧ್ಯಕ್ಷರ ತಿರುಗೇಟು

ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಉದ್ಯಾನವನದ ಜಾಗ ಒತ್ತುವರಿ ಆರೋಪ ಮಾಡಲಾಗಿದೆ. ಈಗ ಆರೋಪಿಸಿರುವ ವ್ಯಕ್ತಿ ಬರೀ ಮುಖ ಮಾತ್ರ. ಇದರ ಹಿಂದೆ ಕಾಣದ ಕೈಗಳಿವೆ.

Nagesh Talawar
ಉದ್ಯಾನ ಜಾಗ ಒತ್ತುವರಿ ಆರೋಪಕ್ಕೆ ಪುರಸಭೆ ಅಧ್ಯಕ್ಷರ ತಿರುಗೇಟು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಉದ್ಯಾನವನದ ಜಾಗ ಒತ್ತುವರಿ(Land Encroachment Allegation)
ಆರೋಪ ಮಾಡಲಾಗಿದೆ. ಈಗ ಆರೋಪಿಸಿರುವ ವ್ಯಕ್ತಿ ಬರೀ ಮುಖ ಮಾತ್ರ. ಇದರ ಹಿಂದೆ ಕಾಣದ ಕೈಗಳಿವೆ. ಅದು ವಿರೋಧ ಪಕ್ಷದವರಾಗಿರಬಹುದು, ಸ್ವಪಕ್ಷೀಯದವರಾಗಿರಬಹುದು. ಆದರೆ, ಒಂದಿಂಚೂ ಜಾಗವನ್ನು ನಾವು ಒತ್ತುವರಿ ಮಾಡಿಕೊಂಡಿಲ್ಲ. ಹಾಗೇನಾದರೂ ಇದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪುರಸಭೆ(TMC) ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು. ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ಸರ್ವೇ ನಂಬರ್ 853/1ರಲ್ಲಿನ ಸಾರ್ವಜನಿಕ ಜಾಗವನ್ನು ನನ್ನ ತಾಯಿ ವಿಜಯಲಕ್ಷ್ಮಿ ಸಿದ್ದಪ್ಪ ಬಿರಾದಾರ ಇವರ ಹೆಸರಿನಲ್ಲಿ ಒತ್ತುವರಿ ಮಾಡಿಕೊಂಡು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಇದು ಸತ್ಯಕ್ಕೆ ದೂರವಾದದ್ದು ಎಂದರು.

ನನ್ನನ್ನು ಕುಗ್ಗಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಆದರೆ, ವಿನಾಕಾರಣ ಇದರಲ್ಲಿ ನನ್ನ ತಂದೆ, ತಾಯಿ ಅವರಿಗೆ ಕಿರುಕುಳಕೊಡುವ ಕೆಲಸ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದು ತೇಜೋವಧೆ ಮಾಡುವ ಕೆಲಸ ನಡೆದಿದೆ. ಲೇಔಟ್ ಮಾಲೀಕರಾದ ನನ್ನ ತಾಯಿಯವರ ಹೆಸರಿನಲ್ಲಿ ನೋಟಿಸ್ ನೀಡಲಾಗುವುದು. ಅಲ್ಲಿ ಸಾರ್ವಜನಿಕ ಜಾಗ ಒತ್ತುವರಿಯಾಗಿದೆ ಅನ್ನೋದು ಕಂಡು ಬಂದರೆ ನನಗೆ ಎಷ್ಟೇ ನಷ್ಟವಾದರೂ ಸರಿ ಮುಂದೆ ನಿಂತು ಜೆಸಿಬಿಯಿಂದ ನೆಲಸಮ ಮಾಡಿಸುತ್ತೇನೆ. ಇದು ಸುಳ್ಳಾದರೆ ಆರೋಪ ಮಾಡಿದವರ ವಿರುದ್ಧ ಪುರಸಭೆ ಎಫ್ಐಆರ್ ದಾಖಲಿಸಬೇಕು. ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಎಲ್ಲ 22 ಸದಸ್ಯರು ಬೆಂಬಲ, ಸಹಕಾರ ನೀಡಿದ್ದಾರೆ. ಆದರೆ, ಕಾಣದ ಕೈಗಳಿಗೆ ವೈಯಕ್ತಿಕವಾಗಿ ನನಗೆ ಡ್ಯಾಮೇಜ್ ಮಾಡುವ ಉದ್ದೇಶವಿರಬಹುದು ಎಂದು ತಿರುಗೇಟು ನೀಡಿದರು. ಪುರಸಭೆ ಸದಸ್ಯ ಬಸವರಾಜ ಯರನಾಳ ಮಾತನಾಡಿ, ಅಧ್ಯಕ್ಷರು ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸಿಕೊಳ್ಳಲು ಆಗದೆ ಈ ರೀತಿ ಮಾಡುತ್ತಿದ್ದಾರೆ. ಸಿಂದಗಿಯಲ್ಲಿ ಶೆಡ್ ಮಾಫಿಯಾ ಇದೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article