ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಮಹಿಳೆಯ ಕೊಲೆಯಾಗಿದೆ. ಮಹಿಳೆಯನ್ನು ಕೊಲೆ ಮಾಡಿ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ತಂದು ಎಸೆದು ಹೋಗಿದ್ದಾರೆ. ಆಫ್ರಿಕಾ ಮೂಲದ ಲೋವಿತ್ ಹತ್ಯೆಯಾದ ಮಹಿಳೆ ಎಂದು ಹೇಳಲಾಗುತ್ತಿದೆ. ಬೆಟ್ಟಹಲಸೂರು ಮುಖ್ಯರಸ್ತೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಆಫ್ರಿಕಾದ ನೈಜೇರಿಯಾದ ಕ್ರಾಸ್ ರಿವರ್ ಮೂಲದ ಲೋವಿತ್ ಅನ್ನೋ ಮಹಿಳೆ ಬೆಂಗಳೂರಿಗೆ ಬಂದಿದ್ದು ಯಾವಾಗ? ಇಲ್ಲಿಯೇ ವಾಸವಾಗಿದ್ದರಾ? ಕೊಲೆ ಮಾಡಿದ್ದು ಯಾರು? ಯಾವ ಉದ್ದೇಶ ಹತ್ಯೆ ನಡೆದಿದೆ ಅನ್ನೋದರ ಕುರಿತು ಪೊಲೀಸರು ತನಿಖೆ ನಡೆಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.