Ad imageAd image

ಸೋರುತಿಹದು ನೂತನ ಸಂಸತ್ ಭವನ

ದೇಶದಲ್ಲಿ ಇತ್ತೀಚೆಗೆ ನಿರ್ಮಿಸಿದ ಸೇತುವೆಗಳು, ವಿಮಾನ ನಿಲ್ದಾಣಗಳು ಕುಸಿದು ಬೀಳುತ್ತಿವೆ, ರಸ್ತೆಯಲ್ಲಿ ಬೃಹತ್ ಗುಂಡಿಗಳು ಬೀಳುತ್ತಿವೆ. ಹೀಗಾಗಿ ಕಳೆಪ ಕಾಮಗಾರಿ ಎಷ್ಟರ ಮಟ್ಟಿಗೆ ನಡೆದಿದೆ ಎನ್ನುವುದಕ್ಕೆ ಸಾಕ್ಷಿಯಾಗುತ್ತಿವೆ.

Nagesh Talawar
ಸೋರುತಿಹದು ನೂತನ ಸಂಸತ್ ಭವನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ದೇಶದಲ್ಲಿ ಇತ್ತೀಚೆಗೆ ನಿರ್ಮಿಸಿದ ಸೇತುವೆಗಳು, ವಿಮಾನ ನಿಲ್ದಾಣಗಳು ಕುಸಿದು ಬೀಳುತ್ತಿವೆ, ರಸ್ತೆಯಲ್ಲಿ ಬೃಹತ್ ಗುಂಡಿಗಳು ಬೀಳುತ್ತಿವೆ. ಹೀಗಾಗಿ ಕಳೆಪ ಕಾಮಗಾರಿ ಎಷ್ಟರ ಮಟ್ಟಿಗೆ ನಡೆದಿದೆ ಎನ್ನುವುದಕ್ಕೆ ಸಾಕ್ಷಿಯಾಗುತ್ತಿವೆ. ಇದರ ನಡುವೆ ದೇಶದ ಮುಕುಟದಂತಿರುವ ನೂತನ ಸಂಸತ್(Parliament building) ಭವನವೇ ಸೋರುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸುರಿಯುತ್ತಿರುವ ಭರ್ಜರಿ ಮಳೆಯಿಂದಾಗಿ ಅನೇಕ ಪ್ರದೇಶಗಳು ಜಾಲವೃತಗೊಂಡಿವೆ. ಸಂಸತ್ ಭವನ ಸೋರುತ್ತಿದೆ.

ಸಂಸತ್ ಭವನದೊಳಗೆ ಮಳೆ(Rain) ನೀರು ಸೋರುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹೊರಗಡೆ ಪೇಪರ್ ಸೋರಿದೆ. ಒಳಗಡೆ ನೀರು ಸೋರಿಕೆ(Water leakage) ಎಂದು ಕಾಂಗ್ರೆಸ್ ಸಂಸದ ಮಣಿಕಂ ಟಾಗೋರ್ ವ್ಯಂಗ್ಯ ಮಾಡುವ ಮೂಲಕ ನೀಟ್ ಪರೀಕ್ಷೆ ಅಕ್ರಮ ಹಾಗೂ ಸಂಸತ್ ಭವನದ ಪರಿಸ್ಥಿತಿ ಬಗ್ಗೆ ಕಿಡಿ ಕಾರಿದ್ದಾರೆ. ಹೊಸ ಸಂಸತ್ ಭವನಕ್ಕಿಂತ ಹಳೆಯ ಸಂಸತ್ ಭವನ ಚೆನ್ನಾಗಿತ್ತು ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

970 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸಂಸತ್ ಭವನ(Loksabha) ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಡಿಸೆಂಬರ್ 10, 2020ರಲ್ಲಿ ಶಂಕು ಸ್ಥಾಪನೆ ಮಾಡಿದ್ದರು. ಮೇ 28, 2023ರಂದು ಉದ್ಘಾಟನೆ ಮಾಡಿದ್ದಾರೆ. ಈಗ ನೋಡಿದರೆ ಒಂದೇ ಮಳೆಗೆ ಸೋರುತ್ತಿದೆ. ಈ ಮೂಲಕ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

WhatsApp Group Join Now
Telegram Group Join Now
Share This Article