ಪ್ರಜಾಸ್ತ್ರ ಸುದ್ದಿ
ಝಾನ್ಸಿ(Jansi): ರಕ್ಷಾ ಬಂಧನ ಹಬ್ಬದ ಮರುದಿನವೇ ತಂಗಿಯನ್ನು ಅಣ್ಣನೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ. ಚದ್ರಾಪುರದ ಕುಮಾರಿ ಅಲಿಯಾಸ್ ಪುಟ್ಟಿ(18) ಕೊಲೆಯಾದ ಯುವತಿಯಾಗಿದ್ದಾಳೆ. ಕೊಲೆಯಾದ ಪುಟ್ಟಿ ಅಣ್ಣ ಅರವಿಂದ್ ಹಾಗೂ ಪ್ರಕಾಶ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಯುವತಿ ಪುಟ್ಟಿ ವಿನೋನ್ ಅನ್ನೋ ಯುವಕನನ್ನು ಪ್ರೀತಿಸುತ್ತಿದ್ದಳು. ಅವನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಕೆಲವು ದಿನಗಳ ನಂತರ ಕುಟುಂಬಸ್ಥರು ಹುಡುಗನೊಂದಿಗೆ ಬೇರ್ಪಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಪುಣೆಯಲ್ಲಿದ್ದ ಅರವಿಂದ್ ಊರಿಗೆ ಬಂದು, ಸ್ನೇಹಿತ ಪ್ರಕಾಶ್ ಎಂಬಾತನ ಜೊತೆಗೆ ಕೂಡಿಕೊಂಡು ವಿನೋದನನ್ನು ಹತ್ಯೆ ಮಾಡಿದ್ದ. ಇದಾದ ಎರಡು ದಿನಗಳ ನಂತರ ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಂಡು ಮರುದಿನ ಆಕೆಯನ್ನು ಸಹ ಹತ್ಯೆ ಮಾಡಿರುವುದು ತಿಳಿದು ಬಂದಿದೆ.