Ad imageAd image

ವಿಮಾನ ದುರಂತ: ಮೃತರ ಸಂಖ್ಯೆ 279ಕ್ಕೆ ಏರಿಕೆ

Nagesh Talawar
ವಿಮಾನ ದುರಂತ: ಮೃತರ ಸಂಖ್ಯೆ 279ಕ್ಕೆ ಏರಿಕೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಅಹಮದಾಬಾದ್(Ahmedabad): ಏರ್ ಇಂಡಿಯಾ ವಿಮಾನ ದುರಂತ ಎಂದೂ ಮರೆಯದ ಘಟನೆಯಾಗಿದೆ. ಇದರಲ್ಲಿ ಮೃತಪಟ್ಟವರ ಹಿಂದೆ ಒಂದೊಂದು ಕಹಾನಿ ಇದೆ. ದಿನ ಕಳೆದಂತೆ ಮೃತರ ಸಂಖ್ಯೆ ಏರಿಕೆಯಾಗುತ್ತಿದ್ದು, ಈಗ 279ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ. ಪೊಲೀಸ್ ಮೂಲಗಳಿಂದ ಈ ಅಂಕಿಸಂಖ್ಯೆ ತಿಳಿದು ಬರುತ್ತಿದೆ. ವಿಮಾನದಲ್ಲಿ 241 ಜನರು ಮೃತಪಟ್ಟಿದ್ದರೆ, ಓರ್ವ ಪವಾಡ ರೀತಿಯಲ್ಲಿ ಪಾರಾಗಿದ್ದಾನೆ.

ಇನ್ನು ವಿಮಾನ ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯದ ಕಟ್ಟಡದ ಮೇಲೆ ಬಿದ್ದಿದ್ದರಿಂದ ಸಾವು ನೋವು ಹೆಚ್ಚಾಗಿದೆ. ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ವಿಮಾನದಲ್ಲಿನ ಇಂಧನ ಸ್ಫೋಟದಿಂದ ದೇಹಗಳು ಛಿದ್ರಗೊಂಡಿವೆ. ಡಿಎನ್ಎ ವರದಿ ಬಳಿಕ ಮೃತರ ಸಂಖ್ಯೆ ಸ್ಪಷ್ಟವಾಗಿ ಹೇಳಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

WhatsApp Group Join Now
Telegram Group Join Now
Share This Article