ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಈರನಗೌಡ ಬಿರಾದಾರ ಅವರನ್ನು ನೇಮಕ ಮಾಡಲಾಗಿದೆ. ಮಾರ್ಚ್ 19ರಂದು ತಾಲೂಕು ಸಮಿತಿಯ ಸಭೆಯಲ್ಲಿ ಸದಸ್ಯರೆಲ್ಲರ ಒಮ್ಮತದ ಅಭಿಪ್ರಾಯದ ಮೇರೆಗೆ ಸರ್ವಾನುಮತದಿಂದ ಈರನಗೌಡ ಬಿರಾದಾರ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಈ ವೇಳೆ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೆಗೌಡರ, ರಾಜ್ಯ ಉತ್ತರ ವಲಯ ರಾಜ್ಯ ಉಪಾಧ್ಯಕ್ಷ ಬಸನಗೌಡ ಧರ್ಮಗೊಂಡ, ಜಿಲ್ಲಾ ಉಪಾಧ್ಯಕ್ಷ ಮಲ್ಲಪ್ಪ ಬೊಮ್ಮನಳ್ಳಿ, ತಾಲೂಕಾಧ್ಯಕ್ಷ ದಶರಥಸಿಂಗ ರಜಪೂತ, ಯಂಕಂಚಿ ಗ್ರಾಮದ ಘಟಕದ ಅಧ್ಯಕ್ಷ ಬೀರಪ್ಪ ಯಂಕಂಚಿ, ನಗರ ಘಟಕ ಅಧ್ಯಕ್ಷ ಶಿವಪ್ಪ ಸುಲ್ಪಿ, ಬಲಭೀಮ ಪರಸನಳ್ಳಿ, ಶಿವಾನಂದ ಭಾಸಗಿ, ಸಿದ್ದಪ್ಪ ಪಾರಸನಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.