ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಶನಿವಾರ ಸಂಜೆ ಹಾಗೂ ರಾತ್ರಿ ಭರ್ಜರಿಯಾಗಿ ಸುರಿದ(Heavy Rain) ಮಳೆಗೆ ಸಿಲಿಕಾನ್ ಸಿಟಿ ಜನರು ಅಕ್ಷರಶಃ ನಲುಗಿದ್ದಾರೆ. ವೀಕೆಂಟ್ ಮಸ್ತಿಗೆ ಹೊರಗೆ ಹೋಗಬೇಕು ಎನ್ನುವವರು ಒಂದು ಕಡೆಯಾದರೆ, ಬದುಕಿನ ಬಂಡಿ ಸಾಗಿಸಬೇಕು ಎನ್ನುವವರು ಮತ್ತೊಂದು ಕಡೆ. ಇವರೆಲ್ಲರಿಗೂ ದೊಡ್ಡ ಸಂಕಷ್ಟ ಸೃಷ್ಟಿಯಾಗಿದೆ. ನಗರದಲ್ಲಿನ ಬಹುತೇಕ ರಸ್ತೆಗಳು, ಅಂಡರ್ ಪಾಸ್ ಗಳು, ತಗ್ಗು ಪ್ರದೇಶದಲ್ಲಿರುವ ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಹೀಗಾಗಿ ಜನರು ಸಂಚಾರಕ್ಕೂ ಪರದಾಡುವಂತಾಗಿದೆ.
ಯಲಹಂಕ, ಸರ್ಜಾಪುರ, ಹೆಬ್ಬಾಳ, ಮಲ್ಲೇಶ್ವರ, ಮೆಜೆಸ್ಟಿಕ್ ಸೇರಿದಂತೆ ಅನೇಕ ಕಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಶನಿವಾರ ಒಂದೇ ದಿನ 36 ಮಿಲಿ ಮೀಟರ್ ಮಳೆಯಾಗಿದೆ. ಭಾನುವಾರ ಸಂಜೆ ಸಹ ನಗರದ ಅನೇಕ ಕಡೆ ಮಳೆಯಾಗುವ ಸಾಧ್ಯತೆಯಿದೆ. ಅನೇಕ ಕಡೆ ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಇದರ ಪರಿಣಾಮ ರಸ್ತೆ ಅಗೆಯಲಾಗಿದೆ. ಈಗ ಅದೆಲ್ಲವೂ ತುಂಬಿಕೊಂಡಿದೆ. ಇಷ್ಟಾದರೂ ಬಿಬಿಎಂಪಿ ಸೂಕ್ತ ಕ್ರಮ ತೆಗೆದುಕೊಳ್ಳದ ಪರಿಣಾಮ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



 
		 
		 
		
 
  
 
 
                     
                     
                    