ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): 1976ರಲ್ಲಿ ತಿದ್ದುಪಡಿಯ ಸಂದಭರ್ದಲ್ಲಿ ಸಂವಿಧಾನದ ಪೀಠಿಕೆಯಲ್ಲಿ(Constitution Preamble) ಸಮಾಜವಾದ ಹಾಗೂ ಜಾತ್ಯಾತೀತ ಎನ್ನುವ ಪದಗಳನ್ನು ಸೇರಿಸಲಾಗಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ(Dismisses) ಮಾಡಿದೆ. ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಬಲರಾಮ್ ಸಿಂಗ್ ಹಾಗೂ ವಕೀಲ ಅಶ್ವಿನಿಕುಮಾರ್ ಉಪಾಧ್ಯಾಯ ಎಂಬುವರು ಅರ್ಜಿ ಸಲ್ಲಿಸಿದ್ದರು.
ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇದೆ. ತಿದ್ದುಪಡಿಯಾಗಿ ಹಲವು ವರ್ಷಗಳಾಗಿವೆ. ಅದನ್ನು ಈಗ ರದ್ದುಪಡಿಸಲು ಆಗುವುದಿಲ್ಲವೆಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠ ಹೇಳಿದೆ. ಈ ಕುರಿತು ನವೆಂಬರ್ 22ರಂದು ತೀರ್ಪು ಕಾಯ್ದಿರಿಸಿತ್ತು. 1976ರ ತುರ್ತು ಪರಿಸ್ಥಿತಿ ವೇಳೆ 42ನೇ ತಿದ್ದುಪಡಿ ಮೂಲಕ ಸಮಾಜವಾದ ಹಾಗೂ ಜಾತ್ಯಾತೀತ(Socialism and Secularism) ಪದಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾಗಿದೆ.