Ad imageAd image

ಕವಿತೆ: ಸುಮ

ತಮಿಳು ಕವಿ ರವಿ ಸುಬ್ರಮಣಿಯನ್ ಅವರ 'ಸುಮ' ಕವಿತೆಯನ್ನು ಖ್ಯಾತ ಹಿರಿಯ ಅನುವಾದಕರು ಹಾಗೂ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಮಲರ್ ವಿಳಿ.ಕೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

Nagesh Talawar
ಕವಿತೆ: ಸುಮ
WhatsApp Group Join Now
Telegram Group Join Now

ತಮಿಳು ಕವಿ ರವಿ ಸುಬ್ರಮಣಿಯನ್ ಅವರ ‘ಸುಮ’ ಕವಿತೆಯನ್ನು ಖ್ಯಾತ ಹಿರಿಯ ಅನುವಾದಕರು ಹಾಗೂ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಮಲರ್ ವಿಳಿ.ಕೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಸುಮದ  ಇರುವಿಕೆ  ಸುವಾಸನೆಯ

ನುಡಿವಾಗ

ಮರದ  ಅಲುಗುವಿಕೆ  ಗಾಳಿಯ

ನುಡಿವಾಗ

ಪಕ್ಷಿಯ  ಹಾಡು  ಸಂಗೀತವ

ನುಡಿವಾಗ

ಬಾಲದ  ಅಲುಗುವಿಕೆ  ಪ್ರೀತಿಯ

ನುಡಿವಾಗ

ನುಡಿಯಿಂದೇನಾಗುವುದು? ನನ್ನ

ನುಡಿಯಿಂದೇನಾಗುವುದು? ನೀ ನುಡಿ

ಚಿನ್ನಾ,

ನುಡಿಯಿಂದೇನಾಗುವುದು ? ನೀ

ನುಡಿ ಚಿನ್ನಾ! ನುಡಿ ಚಿನ್ನಾ!

WhatsApp Group Join Now
Telegram Group Join Now
Share This Article