Ad imageAd image

ದೆಹಲಿ ಕದನ: ಇದುವರೆಗೂ ಆಗಿರುವ ಮತದಾನವೆಷ್ಟು?

Nagesh Talawar
ದೆಹಲಿ ಕದನ: ಇದುವರೆಗೂ ಆಗಿರುವ ಮತದಾನವೆಷ್ಟು?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ(Assembly Elections) ಚುನಾವಣೆಯ ಮತದಾನ ಮುಂಜಾನೆ 7 ಗಂಟೆಯಿಂದ ಶುರುವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಮುಖ್ಯಮಂತ್ರಿ ಅತಿಶಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ದೆಹಲಿ ಮೂಲದ ಘಟಾನುಘಟಿ ನಾಯಕರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮುಂಜಾನೆ 11 ಗಂಟೆಯವರೆಗೆ ಶೇಕಡ 19.95ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ. ಈಶಾನ್ಯ ದೆಹಲಿಯಲ್ಲಿ ಶೇಕಡ 10.07, ಮುಸ್ತಫಾಬಾದ್ ವಿಧಾನಸಭಾದಲ್ಲಿ ಶೇಕಡ 12.43ರಷ್ಟು ಮತದಾನವಾಗಿದೆ. 70 ಸದಸ್ಯ ಬಲವನ್ನು ದೆಹಲಿ ವಿಧಾನಸಭೆ ಹೊಂದಿದೆ. 1.56 ಕೋಟಿ ಮತದಾರರಿದ್ದಾರೆ. 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಡಳಿತರೂಢ ಆಪ್, ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಮತದಾನದ ಬಳಿಕ ಮಾತನಾಡಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ನಮ್ಮ ಸಂವಿಧಾನ ನಮ್ಮೆಲ್ಲರಿಗೂ ಮಹತ್ವದ ಹಕ್ಕು ನೀಡಿದೆ. ಇದನ್ನು ಚಲಾಯಿಸಲು ಎಲ್ಲರೂ ಮನೆಯಿಂದ ಹೊರ ಬಂದು ಮತದಾನ(Voting) ಮಾಡಿ ಎಂದಿದ್ದಾರೆ.

WhatsApp Group Join Now
Telegram Group Join Now
Share This Article