ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ನೆರೆಯ ರಾಷ್ಟ್ರ ಶ್ರೀಲಂಕಾದ ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಅವರು ಸೋಮವಾರ ಭಾರಕ್ಕೆ ಭೇಟಿ ನೀಡಿದ್ದಾರೆ. ದೇಶದ ಚುಕ್ಕಾಣಿ ಹಿಡಿದ ಬಳಿಕ ಇದು ಅವರ ಮೊದಲ ವಿದೇಶ ಪ್ರಯಾಣವಾಗಿದೆ. ನವದೆಹಲಿಗೆ ಭೇಟಿ ನೀಡಿರುವುದು ನನಗೆ ತುಂಬಾ ಸಂತೋಷವಾಗಿದೆ. ನನ್ನನ್ನು ಆಹ್ವಾನ ನೀಡಿದ ಭಾರತಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಇನ್ನು ಪ್ರಧಾನಿ ಮೋದಿಯೊಂದಗಿನ ಭೇಟಿ, ಉಭಯ ರಾಷ್ಟ್ರಗಳ ನಡುವಿನ ಚರ್ಚೆ ಖುಷಿ ನೀಡಿದೆ. 4 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ್ದಕ್ಕಾಗಿ ಭಾರತಕ್ಕೆ ಕೃತಜ್ಞತೆಗಳು. ಎರಡು ರಾಷ್ಟ್ರಗಳ ನಡುವಿನ ಸಹಕಾರ ಮತ್ತಷ್ಟು ಬಲಗೊಳ್ಳಲಿದೆ. ಶ್ರೀಲಂಕಾ ಸರ್ಕಾರ ತಮಿಳುನಾಡಿನ ಜನರ ಆಸೆಗಳನ್ನು ಈಡೇರಿಸುತ್ತದೆ. ಮೀನುಗಾರರ ಸಮಸ್ಯೆಯನ್ನು ಮಾನವೀಯ ಹಿನ್ನಲೆಯಲ್ಲಿ ಪರಿಹರಿಸಲಾಗುವುದು ಎಂದು ದಿಸ್ಸಾನಾಯಕೆ ಹೇಳಿದ್ದಾರೆ.