ಪ್ರಜಾಸ್ತ್ರ ಸುದ್ದಿ
ಅಯೋಧ್ಯೆ(Ayodhya): ರಾಮ ಮಂದಿರದಲ್ಲಿ ಪ್ರಧಾನಿ ಮೋದಿ ಮಂಗಳವಾರ ಧ್ವಜಾರೋಹಣ ಮಾಡಿದರು. ದೇವಸ್ಥಾನದ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಅದರ ಸಂಕೇತವಾಗಿ ಕೇಸರಿ ಧ್ವಜವನ್ನು ಹಾರಿಸಿದರು. 10 ಅಡಿ ಎತ್ತರ, 20 ಅಡಿ ಉದ್ದದ ತ್ರಿಕೋನ ಧ್ವಜದಲ್ಲಿ ಸೂರ್ಯ, ಓಂ ಹಾಗೂ ಕೋವಿದಾರ ವೃಕ್ಷವನ್ನು ಒಳಗೊಂಡಿದೆ. ನಾಗರ ಶೈಲಿಯಲ್ಲಿ ಈ ಧ್ವಜವಿದೆ.
ರಾಮ ಮಂದಿರ ಪೂರ್ಣಗೊಂಡಿದೆ ಅನ್ನೋದರ ಸಂಕೇತವಾಗಿ ಈ ಸಮಾರಂಭ ಮಾಡಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಪಂಚತ್ ರಾಯ್ ತಿಳಿಸಿದ್ದಾರೆ. ಧ್ವಜಾರೋಹಣಕ್ಕೂ ಮೊದಲು ಪ್ರಧಾನಿ ಮೋದಿ ರೋಡ್ ಶೋ ಮಾಡಿದ್ದು, ಅಪಾರ ಸಂಖ್ಯೆಯಲ್ಲಿ ಜನರು ರಸ್ತೆಯ ಎರಡು ಬದಿಯಲ್ಲಿ ನಿಂತು ಅವರನ್ನು ಸ್ವಾಗತಿಸಿದರು.




