Ad imageAd image

ಪ್ರಧಾನ ಮಂತ್ರಿ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿದ ಪ್ರಧಾನಿ

Nagesh Talawar
ಪ್ರಧಾನ ಮಂತ್ರಿ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿದ ಪ್ರಧಾನಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ದೆಹಲಿ ಕರ್ತವ್ಯಪಥದಲ್ಲಿ ಶುಕ್ರವಾರ ಪ್ರಧಾನಿ ಮೋದಿ ಸೇವಾ ತೀರ್ಥ ಅನ್ನೋ ನೂತನ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಪ್ರಧಾನ ಮಂತ್ರಿ ಕಚೇರಿ ಸೇರಿದಂತೆ ಕರ್ತವ್ಯ ಭವನ-1 ಹಾಗೂ 2 ಇಲ್ಲಿವೆ. ಸೌತ್ ಬ್ಲಾಕ್ ನಲ್ಲಿರುವ ಕಚೇರಿಯಿಂದ ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಲಾಗುತ್ತಿತ್ತು. ಇದೀಗ ನೂತನ ಕಟ್ಟಡಕ್ಕೆ ಸ್ಥಾಳಂತರಗೊಂಡಿದೆ.

ಈ ಬಗ್ಗೆ ಪಿಎಂಒ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ಕ್ಯಾಬಿನೆಟ್ ಸಚಿವಾಲಯ ಒಳಗೊಂಡಿದೆ. ಅಲ್ಲದೆ ಕರ್ತವ್ಯ ಭವನ 1 ಹಾಗೂ 2ರಲ್ಲಿ ಹಣಕಾಸು, ರಕ್ಷಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ, ಸಂಸ್ಕೃತಿ, ಕಾನೂನು ಹಾಗೂ ನ್ಯಾಯ ಸಚಿವಾಲಯ, ಕೃಷಿ, ಮಾಹಿತಿ ಮತ್ತು ಪ್ರಸಾರ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯಗಳು ಕೆಲಸ ಮಾಡಲಿವೆ.

WhatsApp Group Join Now
Telegram Group Join Now
Share This Article