Ad imageAd image

ಮುಂಜಾನೆ 4 ಗಂಟೆಯ ತನಕ ನಡೆದ ರಾಜ್ಯಸಭಾ ಕಲಾಪ

Nagesh Talawar
ಮುಂಜಾನೆ 4 ಗಂಟೆಯ ತನಕ ನಡೆದ ರಾಜ್ಯಸಭಾ ಕಲಾಪ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ರಾಜ್ಯಸಭಾ ಕಲಾಪ ಸುದೀರ್ಘ 17 ಗಂಟೆಗಳ ಕಾಲ ನಡೆದಿದೆ. ಗುರುವಾರ ಮುಂಜಾನೆ 11 ಗಂಟೆಗೆ ಶುರುವಾದ ಕಲಾಪ ಶುಕ್ರವಾರ ಮುಂಜಾನೆ 4 ಗಂಟೆ 2 ನಿಮಿಷದ ತನಕ ಕಲಾಪ ನಡೆದಿದೆ. ಈಗ ಮತ್ತೆ 11 ಗಂಟೆಗೆ ಕಲಾಪ ಶುರುವಾಗಲಿದೆ. ಇದೊಂದು ಅಪರೂಪದ ಸನ್ನಿವೇಶ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಹೇಳಿದರು.

ಗುರುವಾರ 11 ಗಂಟೆಗೆ ಕಲಾಪ ಪ್ರಾರಂಭವಾಯಿತು. ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ಅವಧಿ ನಡೆಯಿತು. ಮಧ್ಯಾಹ್ನ 1 ಗಂಟೆಗೆ ವಕ್ಫ್ ಕಾಯ್ದೆ ತಿದ್ದುಪಡಿ-2025 ಚರ್ಚೆ ನಡೆಯಿತು. ಶುಕ್ರವಾರ ನಸುಕಿನಜಾವ 2.30ಕ್ಕೆ ಅಂಗೀಕಾರವಾಯಿತು. ಕಾಯ್ದೆ ಪರವಾಗಿ 128 ಮತಗಳು, ವಿರುದ್ಧವಾಗಿ 95 ಮತಗಳು ಬಿದ್ದವು. ನಂತರ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ನಿರ್ಣವನ್ನು ಗೃಹ ಸಚಿವ ಅಮಿತ್ ಶಾ ಮಂಡಿಸಿದರು. ಇದಕ್ಕೆ ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.

WhatsApp Group Join Now
Telegram Group Join Now
Share This Article