ಪ್ರಜಾಸ್ತ್ರ ಸುದ್ದಿ
ತೆಲುಗು ಸಿನಿ ದುನಿಯಾದಲ್ಲಿ ಸಖತ್ ಮಿಂಚುತ್ತಿರುವ ನಟಿಯರಲ್ಲಿ ಮೃಣಾಲ್ ಠಾಕೂರ್(Mrunal Thakur) ಕೂಡ ಒಬ್ಬರು. ತುಂಬಾ ಕಡಿಮೆ ಅವಧಿಯಲ್ಲಿ ಹೆಚ್ಚು ನೇಮ್, ಫೇಮ್ ಪಡೆದ ನಟಿ ಆಗಾಗ ತಮ್ಮ ಖಾಸಗಿ ಬದುಕಿನ ಬಗ್ಗೆ ಹೇಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯಾಗಿರುವ ನಟಿ ಜೀವನದಲ್ಲಿಯೂ ಬ್ರೇಕಪ್ ಕಥೆಗಳಿವೆ. ಈ ಬಗ್ಗೆ ಸ್ವತಃ ನಟಿ ಹೇಳಿದ್ದಾರೆ. ತಮ್ಮ ಅವರ ನಡುವೆ ಯಾಕೆ ಬ್ರೇಕಪ್ ಆಯ್ತು ಅಂತನಾ ಹೇಳಿದ್ದಾರೆ.
ನಾನೊಬ್ಬನೊಂದಿಗೆ ಡೇಟಿಂಗ್ ನಲ್ಲಿದ್ದೆ. ಅವರಿಗೆ ಸಿನಿಮಾ(Film) ನಟಿಯೊಂದಗಿನ ಸಂಬಂಧ ಇಷ್ಟವಾಗಲಿಲ್ಲ. ಹೀಗಾಗಿ ನಾವು ದೂರವಾದೇವು. ಇದರಿಂದ ನಾನು ಹೆಚ್ಚು ದುಃಖವಾಗುವಂತಹ ಸಂಬಂಧವೇನು ಆಗಿರಲಿಲ್ಲ. ನಾನು ಮದುವೆಯಾಗುವ ಹುಡುಗ ತುಂಬಾ ಸುಂದರವಾಗಿರಬೇಕು ಅಂತ ಏನಿಲ್ಲ. ಒಳ್ಳೆಯ ಗುಣಗಳು ಇರಬೇಕು ಎಂದು ಪಾಡ್ ಕಾಸ್ಟ್ ನಲ್ಲಿ ನಟಿ ಮೃಣಾಲ್ ಠಾಕೂರ್ ಹೇಳಿದ್ದಾರೆ.