ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devarahipparagi): ರೈತರು ತಮ್ಮ ಹೊಲಗಳಿಗೆ ಓಡಾಡಲು ದಾರಿ ಬಿಡಿಸಿಕೊಡಲು ಆಗ್ರಹಿಸಿ ಯಾಳವಾರ ಹಾಗೂ ನಾಗರಾಳ ಡೋಣ ಗ್ರಾಮದ ರೈತರು ತಾಳಿಕೋಟಿ ರಸ್ತೆ ಬಂದ್ ಮಾಡಿ ಮಂಗಳವಾರ ಪ್ರತಿಭಟನೆ ಮಾಡಿದರು. ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಬಾರದ ಹಿನ್ನಲೆಯಲ್ಲಿ ಸಂಜೆ ರಸ್ತೆಗೆ ಮುಳ್ಳಿನ ಕಂಟಿಗಳನ್ನು ಇಟ್ಟು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಯಾಳವಾರ ಹಾಗೂ ನಾಗರಾಳ ಡೋಣ ಗ್ರಾಮದ ರೈತರು ತಮ್ಮ ಜಮೀನಿಗಳಿಗೆ ಈಗ ಕೆಲ ಬಲಾಡ್ಯರು ದಾರಿಯನ್ನು ಬಿಡದೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಹಾಗೂ ಸಿಪಿಐ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈಗಷ್ಟೇ ಮುಂಗಾರು ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದೆ. ತುರ್ತು ಕ್ರಮ ಕೈಗೊಂಡು ರೈತರು ತಮ್ಮ ಹೊಲಗಳಿಗೆ ಹೋಗಲು ದಾರಿ ಬಿಡಿಸಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ಸ
ಇದೇ ಸಂದರ್ಭದಲ್ಲಿ ವಿಜಯಕುಮಾರ ನಾಡಗೌಡ, ಸಂಗನಗೌಡ ತೆಗ್ಗಿನಮನಿ, ಸಂತೋಷ ಮುಸುಗುರಿ, ರಾಮನಗೌಡ ಉಮ್ಮಣ್ಣವರ, ಮಡಿವಾಳಪ್ಪ ಉಮ್ಮಣ್ಣವರ, ಬಸಯ್ಯ ಚರಂತಿಮಠ, ಬಸಯ್ಯ ಹಿರೇಮಠ, ಸೋಮಯ್ಯ ಹಿರೇಮಠ, ದೇವೇಂದ್ರ ಖಾನಾಪುರ, ಬಸನಗೌಡ ಬಿರಾದಾರ, ನಿಂಗನಗೌಡ ಖಾನಾಪುರ, ಭೀಮಣ್ಣ ಉಪ್ಪಾರ, ಬಸನಗೌಡ ದೊಡ್ಡಮನಿ, ರಮೇಶ ಗುರುಮಠ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.