Ad imageAd image

ಟಾಕ್ಸಿಕ್ ಜರ್ನಿ ಶುರು ಎಂದ ರಾಕಿಂಗ್ ಸ್ಟಾರ್

ಕೆಜಿಎಫ್ ಸಿನಿಮಾ ಆದಮೇಲೆ ನಟ ಯಶ್ ಅಭಿನಯದ ಯಾವುದೇ ಚಿತ್ರಗಳು ಇದುವರೆಗೂ ಬಂದಿಲ್ಲ. ಅದಾಗಲೇ 2 ವರ್ಷ ಕಳೆದು ಹೋಗಿದೆ. ಅವರ ಫ್ಯಾನ್ಸ್ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

Nagesh Talawar
ಟಾಕ್ಸಿಕ್ ಜರ್ನಿ ಶುರು ಎಂದ ರಾಕಿಂಗ್ ಸ್ಟಾರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೆಜಿಎಫ್(KGF) ಸಿನಿಮಾ ಆದಮೇಲೆ ನಟ ಯಶ್(thenameisyash) ಅಭಿನಯದ ಯಾವುದೇ ಚಿತ್ರಗಳು ಇದುವರೆಗೂ ಬಂದಿಲ್ಲ. ಅದಾಗಲೇ 2 ವರ್ಷ ಕಳೆದು ಹೋಗಿದೆ. ಅವರ ಫ್ಯಾನ್ಸ್ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈಗಾಗ್ಲೇ ಅನೌನ್ಸ್ ಮಾಡಿದಂತೆ ಟಾಕ್ಸಿಕ್ ಚಿತ್ರ ಈಗ ಶೆಟ್ಟೇರುತ್ತಿದೆ. ಈ ಬಗ್ಗೆ ನಟ ಯಶ್ ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದ್ ಜರ್ನಿ ಬಿಗೇನ್ಸ್ ಟಾಕ್ಸಿಕ್(Toxic) ಎಂದಿದ್ದಾರೆ.

ನಿರ್ದೇಶಕಿ ಗೀತು ಮೋಹನದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್(KVN) ಪ್ರೊಡಕ್ಷನ್ ಸಿನಿಮಾ ನಿರ್ಮಾಣ ಮಾಡುತ್ತಿದೆ. ನಟನೆಯ ಜೊತೆಗೆ ಚಿತ್ರದಲ್ಲಿ ಯಶ್ ಸಹ ಬಂಡವಾಳ ಹೂಡಿದ್ದಾರೆ. ಚಿತ್ರದ ನಾಯಕ ನಟಿ ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಕಿಯಾರಾ ಅಡ್ವಾಣಿ(kiara advani), ನಯನತಾರಾ(nayanthara) ಎಂದು ಹೇಳಲಾಗುತ್ತಿದೆ. ಏಪ್ರಿಲ್ 10, 2025ಕ್ಕೆ ಸಿನಿಮಾ ರಿಲಿಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಿಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಒಟ್ಟಾರೆಯಾಗಿ ಕೆಜೆಎಫ್ ಬಳಿಕ ಯಶ್ ತಮ್ಮ ಮುಂದಿನ ಚಿತ್ರಕ್ಕೆ 3 ವರ್ಷ ಸಮಯ ತೆಗೆದುಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article