Ad imageAd image

ಇರಾನ್ ಕ್ಷಿಪಣಿ ದಾಳಿಯ ಬಳಿಕ ಮುಂಬೈಗೆ ಕಚ್ಚಾ ತೈಲ ತಂದ ಹಡಗು

Nagesh Talawar
ಇರಾನ್ ಕ್ಷಿಪಣಿ ದಾಳಿಯ ಬಳಿಕ ಮುಂಬೈಗೆ ಕಚ್ಚಾ ತೈಲ ತಂದ ಹಡಗು
WhatsApp Group Join Now
Telegram Group Join Now

ಮುಂಬೈ(Mumbai): ಪಶ್ಚಿಮ ಏಷ್ಯ ಸಂಘರ್ಷದಿಂದಾಗಿ ಕಚ್ಚಾ ತೈಲದಲ್ಲಿ ತೀವ್ರ ಅಭಾವ ಕಂಡು ಬಂದಿದೆ. ಭಾರತಕ್ಕೆ ಸರಕು ತೆಗೆದುಕೊಂಡು ಬರುತ್ತಿದ್ದ ಮಯೂರ ನಾರಿ ಹೆಸರಿನ ಹಡಗು ಹೂರ್ಮುಜ್ ಜಲಸಂಧಿ ಹತ್ತಿರ ಇರಾನ್ ಕ್ಷಿಪಣಿ ದಾಳಿಗೆ ಇಡಾಗಿತ್ತು. ಇಬ್ಬರು ಭಾರತೀಯರು ಮೃತಪಟ್ಟಿದ್ದರು. ಇದಾದ ಬಳಿಕ ಮಾರ್ಚ್ 11ರಂದು ಮುಂಬೈಗೆ ಕಚ್ಚಾ ತೈಲ ಹೊತ್ತ ಹಡಗು ಬಂದಿದೆ.

ಶೆನ್ಲಾಂಗ್ ಸೂಯೆಜ್ ಮ್ಯಾಕ್ಸ್ ಹೆಸರಿನ ಹಡಗು 1,35,335 ಟನ್ ಕಚ್ಚಾ ತೈಲ ಹೊತ್ತುಕೊಂಡು ಬಂದಿದೆ. 36 ಗಂಟೆಯೊಳಗೆ ಇದನ್ನು ಮಹುಲ್ ಹಾಗೂ ಪೂರ್ವ ಮುಂಬೈನಲ್ಲಿರುವ ರಿಫೈನರಿಗಳಿಗೆ ಸಾಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಡಗಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಪಿಲಿಪ್ಪೀನ್ಸ್ ಗೆ ಸೇರಿದ 29 ಸಿಬ್ಬಂದಿ ಇದ್ದರು. ಭಾರತ ಮೂಲದ 28 ಹಡಗುಗಳು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿವೆ.

WhatsApp Group Join Now
Telegram Group Join Now
Share This Article