ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಪ್ರಧಾನಿ ಮೋದಿ ಕಳೆದ ವರ್ಷ ಸಿಂಧುದುರ್ಗ ಜಿಲ್ಲೆಯ ಕೋಟೆಯಲ್ಲಿ ಶಿವಾಜಿ(shivaji statue)ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಅದು ಇಂದು(ಸೋಮವಾರ) ಕುಸಿದು ಬಿದ್ದಿದೆ. 35 ಅಡಿ ಎತ್ತರದ ಪ್ರತಿಮೆ ಮಧ್ಯಾಹ್ನ ಉರುಳಿ(collapse) ಬಿದ್ದಿದೆ. ಈ ಬಗ್ಗೆ ವಿಪಕ್ಷಗಳು ಮಹಾರಾಷ್ಟ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿವೆ. ಕಾಮಗಾರಿಯ ಗುಣಮಟ್ಟದ ಕಡೆ ಗಮನ ಹರಿಸದೆ ಟೆಂಡರ್ ಕಮಿಷನ್ ನಿಂದ ಇದೆಲ್ಲ ಆಗುತ್ತಿದೆ ಎಂದು ಕಿಡಿ ಕಾರಲಾಗಿದೆ.
ಮಾಲ್ವಾನ್ ರಾಜ್ ಕೋಟ್ ಕೋಟೆಯಲ್ಲಿ ಕಳೆದ ಡಿಸೆಂಬರ್ 4ರಂದು ನೌಕಾಪಡೆಯ ದಿನದಂದು ಪ್ರಧಾನಿ ಮೋದಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಿದ್ದರು. ಕಳೆದ ಎರಡ್ಮೂರು ದಿನಗಳಿಂದ ಮಳೆ, ಗಾಳಿಯಾಗುತ್ತಿದೆ. ಇದರಿಂದ ಬಿದ್ದಿರಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದು, ಇದರ ಬಗ್ಗೆ ತನಿಖೆಯಾಗುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರ ಕಾಮಗಾರಿ ಗುಣಮಟ್ಟದ ಬಗ್ಗೆ ಗಮನ ಹರಿಸಿಲ್ಲ. ಮಹಾರಾಷ್ಟ್ರ ಸರ್ಕಾರ ಹೊಸ ಟೆಂಡರ್ ಗಳನ್ನು ನೀಡಿ ಕಮಿಷನ್ ಪಡೆಯುತ್ತಿದೆ ಎಂದು ಮಾಜಿ ಸಚಿವ ಜಯಂತ್ ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು. ಪ್ರತಿಮೆ ನಿರ್ಮಾಣ ಹಾಗೂ ಕಾಮಗಾರಿಗೆ ಮಾಡಿದವರ ಕುರಿತು ಸಂಪೂರ್ಣ ತನಿಖೆಯಾಗಲಿ ಎಂದಿದ್ದಾರೆ.