ಪ್ರಜಾಸ್ತ್ರ ಸುದ್ದಿ
ಬೀದರ(Bidara): ಇದು ಅತ್ಯಂತ ಕರುಣಾಜನಕ, ನೋವಿನ ಸಂಗತಿಯಾಗಿದೆ. 7 ವರ್ಷದ ಮಗುವನ್ನು ಮಲತಾಯಿ 3ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ನಗರದ ಆದರ್ಶ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. 7 ವರ್ಷದ ಸಾನ್ವಿ ಮೃತ ದುರ್ದೈವಿ ಬಾಲಕಿಯಾಗಿದ್ದಾಳೆ. ಮಲತಾಯಿ ರಾಧಾ ಈ ನೀಚ ಕೃತ್ಯವೆಸಗಿದ್ದಾಳೆ.
ಆಗಸ್ಟ್ 28ರಂದು ಈ ಘಟನೆ ನಡೆದಿದೆ. ಬಾಲಕಿ ತಂದೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದಾಖಲಿಸಿದ್ದರು. ಪೊಲೀಸರು ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದಾಗ ರಾಧಾ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಳು. ಆಕೆಯನ್ನು ವಿಚಾರಣೆ ಮಾಡಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ. ಆಟವಾಡಿಸುವ ನೆಪದಲ್ಲಿ 3ನೇ ಮಹಡಿಗೆ ಕರೆದುಕೊಂಡು ಹೋಗಿದ್ದಾಳೆ. ನಂತರ ಅಲ್ಲಿಂದ ತಳ್ಳಿದ್ದಾಳೆ. ಮೃತ ಬಾಲಕಿಯ ತಾಯಿ 6 ವರ್ಷಗಳ ಹಿಂದೆ ಕಾಯಿಲೆಯಿಂದ ಮೃತಪಟ್ಟಿದ್ದರು. ಇದೀಗ ನೋಡಿದರೆ ಮಲತಾಯಿ ಆಕೆಯ ಮಗವನ್ನು ಹತ್ಯೆ ಮಾಡಿದ್ದಾಳೆ.