ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ದಿ ಡೆವಿಲ್ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. 2.16 ನಿಮಿಷದ ಟ್ರೇಲರ್ ಖಡಕ್ ಆಗಿದೆ. ಡಿ ಬಾಸ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತೆ ಮಾಸ್ ಆಗಿದೆ. ಒಂದೊಂದು ಡೈಲಾಗ್ ಸಹ ಸಖತ್ ಆಗಿದ್ದು, ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಟ್ರೇಲರ್ ಕೊನೆಯಲ್ಲಿ ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ ಅನ್ನೋ ಡೈಲಾಗ್ ಸಖತ್ ಕಿಕ್ ಕೊಡುತ್ತಿದೆ. ಇದು ನಟ ದರ್ಶನ್ ರಿಯಲ್ ಬದುಕಿಗೂ ಅನ್ವಿಸುತ್ತೆ ಎಂದು ಹೇಳಲಾಗುತ್ತಿದೆ.
ನಿರ್ದೇಶಕ ಪ್ರಕಾಶ್ ವೀರ್ ಅವರ ಹಿಂದಿನ ಸಿನಿಮಾಗಳನ್ನು ನೋಡಿದರೆ ಕ್ಲಾಸ್ ಅಂಡ್ ಮಾಸ್ ಇರುತ್ತಿತ್ತು. ಬಟ್ ದಿ ಡೆವಿಲ್ ಸಿನಿಮಾ ಪಕ್ಕಾ ಮಾಸ್ ಆಗಿದೆ. ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ದರ್ಶನ್ ರಂತಹ ಸ್ಟಾರ್ ಡಮ್ ಹೀರೋಗೆ ಹೇಳಿ ಮಾಡಿಸಿದ ಸಿನಿಮಾ ಇದು. ಕಳೆದ ವರ್ಷದ ಡಿಸೆಂಬರ್ ನಲ್ಲಿ ಬಂದ ಕಾಟೇರ ಸಿನಿಮಾ ದರ್ಶನ್ ಕರಿಯರ್ ನ ಹೊಸ ಮೈಲುಗಲ್ಲು. ಈ ವರ್ಷದ ಡಿಸೆಂಬರ್ ನಲ್ಲಿ ಬರುತ್ತಿರುವ ದಿ ಡೆವಿಲ್ ಮತ್ತೊಂದು ಸೂಪರ್ ಹಿಟ್ ಆಗುವುದರಲ್ಲಿ ಡೌಟ್ ಇಲ್ಲ.
ನಿರ್ದೇಶಕ ಪ್ರಕಾಶ್ ವೀರ್ ಕಲ್ಪನೆಯ ಸಿನಿಮಾ ಭರ್ಜರಿಯಾಗಿ ಬಂದಿದೆ. ದರ್ಶನ್ ಗೆ ಜೋಡಿಯಾಗಿ ನಟಿ ರಚನಾ ರೈ ಕಾಣಿಸಿಕೊಂಡಿದ್ದಾರೆ. ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಇದೆ. ಡಿಸೆಂಬರ್ 11ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಕೋಟ್ಯಾಂತರ ಫ್ಯಾನ್ಸ್ ಸೇರಿದಂತೆ ಅನೇಕರು ಕುತೂಹಲದಿಂದ ಕಾಯುತ್ತಿದ್ದಾರೆ. ಕಾಮಿಡಿ ನಟರಾದ ಹುಲಿ ಕಾರ್ತಿಕ್, ಗಿಲ್ಲಿ ನಟ ಹಾಗೂ ಶೈನ್ ಶೆಟ್ಟಿ ಸೇರಿದಂತೆ ಹಿರಿಯ ನಟರ ಬಹುದೊಡ್ಡ ತಾರಾ ಬಳಗವಿದೆ.




