ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪ್ರಕರಣವೊಂದರಲ್ಲಿ ಮಾತನಾಡುವಾಗ ಕರ್ನಾಟಕ(High Court) ಹೈಕೋರ್ಟ್ ನ್ಯಾಯಮೂರ್ತಿ(Judge) ವೇದವ್ಯಾಸಾಚಾರ್ ಶ್ರೀಶಾನಂದ್ ಅವರು ಬೆಂಗಳೂರಲ್ಲಿನರುವ ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಹೀಗಾಗಿ ವಿವಾದ ಪಡೆದುಕೊಂಡಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ಹೇಳಿಕೆಗೆ ಸುಪ್ರೀಂ ಕೋರ್ಟ್ ಗರಂ ಆಗಿದೆ. ಈ ಸಂಬಂಧ ವರದಿ ಕೇಳಿದೆ.
ಸುಪ್ರೀಂ ಕೋರ್ಟ್((Supreme Court)) ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಎಸ್.ಖನ್ನಾ, ಎಚ್.ರಾಯ್, ಎಸ್.ಕಾಂತ್ ಇವರನ್ನೊಳಗೊಂಡ ಪಂಚಪೀಠ ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ. ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಗೋರಿಪಾಳ್ಯದಲ್ಲಿ ಆಟೋದಲ್ಲಿ ಕನಿಷ್ಠ 10 ಜನರು ಇರುತ್ತಾರೆ. ಅಲ್ಲಿ ಏನೂ ಮಾಡಕ್ಕಾಗಲ್ಲ. ಅದು ಪಾಕಿಸ್ತಾನದಲ್ಲಿದೆ. ಇಂಡಿಯಾದಲ್ಲಿ ಇಲ್ಲ. ಎಂತಹ ಖಡಕ್ ಪೊಲೀಸ್ ಅಧಿಕಾರಿಯನ್ನು ಅಲ್ಲಿ ಹಾಕಿದರೂ ಏನೂ ಮಾಡಲ್ಲ ಎಂದು ಹೇಳಿದ ವಿವಾದಾತ್ಮಕ ಮಾತುಗಳು ಸಾಕಷ್ಟು ಪರ ವಿರೋಧಗಳಿಗೆ ಕಾರಣವಾಗಿದೆ.