ಪ್ರಜಾಸ್ತ್ರ ಸುದ್ದಿ
ಹೈದರಾಬಾದ್(Hyderabad): ಕರ್ನಾಟಕ ಮೂಲದ ಒಂದೇ ಕುಟುಂಬದ ಐವರು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮಿಯಾಪುರ ನಗರದಲ್ಲಿ ನಡೆದಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇವರೆಲ್ಲರ ಸಾವು ಹೇಗೆ ಸಂಭವಿಸಿದೆ ಅನ್ನೋದರ ತನಿಖೆ ನಡೆಯುತ್ತಿದೆ.
ಮೃತರು ಕರ್ನಾಟಕದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ರಂಜೋಲಿಯ ಲಕ್ಷ್ಮಯ್ಯ(60), ವೆಂಕಟಮ್ಮ(55), ಅನಿಲ್(32), ಕವಿತಾ(24) ಹಾಗೂ 2 ವರ್ಷದ ಮಗವೊಂದು ಮೃತಪಟ್ಟಿದೆ. ಒಂದೇ ಕುಟುಂಬದ ಐವರ ಈ ಸಾವು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.