ಪ್ರಜಾಸ್ತ್ರ ಸುದ್ದಿ
ಉಡುಪಿ(Udupi): ಮನೆ ಕಳ್ಳತನ(Theft) ಮಾಡಿದ್ದ ದಂಪತಿಯನ್ನು 7 ಗಂಟೆಯಲ್ಲೇ ಪೊಲೀಸರು ಬಂಧಿಸಿರುವ ಪ್ರಕರಣ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ. ಗುಜ್ಜಾಡಿ ನಿವಾಸಿ ವಿನಾಯಕ(41), ಪತ್ನಿ ಪ್ರಮೀಳಾ(30) ಬಂಧಿತರು. ಬಂಧಿತರಿಂದ 2 ಲಕ್ಷ ಮೌಲ್ಯದ ಚಿನ್ನಾಭರಣ, ಸ್ಕೂಟಿಯನ್ನು ವಶಕ್ಕೆ(Arrest) ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 21ರ ಮುಂಜಾನೆ ತ್ರಾಸಿ ಬೀಚ್ ಹತ್ತಿರದ ಮನೆಯೊಂದರಲ್ಲಿ ಮೇಜಿನ ಮೇಲೆ ಇಟ್ಟಿದ್ದ ಬ್ಯಾಗ್ ನಲ್ಲಿದ್ದ 16 ಗ್ರಾಂ ಚಿನ್ನದ ನಕ್ಲೇಸ್, 16 ಗ್ರಾಂ ಬಳೆ, 3 ಗ್ರಾಂ ತೂಕದ 3 ಉಂಗುರು ಕದ್ದು ಪರಾರಿಯಾಗಿದ್ದರು. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ಹರೀಶ್.ಆರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಾತ್ರಿ 8 ಗಂಟೆಯ ಸುಮಾರಿಗೆ ಆರೋಪಿಗಳಾದ ವಿನಾಯಕ, ಪ್ರಮೀಳಾ ದಂಪತಿಯನ್ನು(Couple) ಬಂಧಿಸಿದ್ದಾರೆ.