Ad imageAd image

ಸಂಜೆ ಭೈರತಿ ರಣಗಲ್ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟನೆಯ ಭೈರತಿ ರಣಗಲ್ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ.

Nagesh Talawar
ಸಂಜೆ ಭೈರತಿ ರಣಗಲ್ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟನೆಯ ಭೈರತಿ ರಣಗಲ್(bhairathi ranagal) ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಇದು ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿದೆ. ನರ್ತನ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಈಗಾಗ್ಲೇ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಗೀತಾ ಪಿಕ್ಚರ್ಸ್ ಅಡಿ ಗೀತಾ ಶಿವರಾಜಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ.

ಮಫ್ತಿ ಚಿತ್ರದಲ್ಲಿ ನಟ ಶಿವರಾಜಕುಮಾರ್(NimmaShivanna) ಡಾನ್ ರೀತಿಯಲ್ಲಿದ್ದರೂ ಹಿನ್ನಲೆ ಬೇರೆಯದ್ದಾಗಿತ್ತು. ಅದು ಇಲ್ಲಿ ರಿವೀಲ್ ಆಗಲಿದೆ. ಯಾಕಂದರೆ ವಕೀಲ ವೃತ್ತಿಯ ಕೋಟ್ ತೊಟ್ಟಿರುವ ಪೋಸ್ಟರ್ ರಿವೀಲ್ ಮಾಡಲಾಗಿದೆ. ಹೀಗಾಗಿ ಮಫ್ತಿಯಲ್ಲಿನ ಪಾತ್ರಕ್ಕೆ ಇಲ್ಲಿ ಲಿಂಕ್ ಸಿಗಲಿದೆ. ರುಕ್ಮುಣಿ ವಸಂತ್, ಅವಿನಾಶ್, ದೇವರಾಜ್ ಸೇರಿದಂತೆ ಅನೇಕ ಹಿರಿಯ ಕಲಾವಿದ್ದಾರೆ.

WhatsApp Group Join Now
Telegram Group Join Now
Share This Article