ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಬೆಳ್ತಂಗಡಿಯಲ್ಲಿ ನಿನ್ನೆ ವಿದ್ಯಾರ್ಥಿನಿಯೊಬ್ಬಳ ಅಪಹರಣ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಇದರ ಹಿಂದಿನ ಸತ್ಯ ಬಯಲಾಗಿದ್ದು, ಮಂಗಳೂರಿನ ಕಾಲೇಜಿಗೆ ಸೇರುವ ಉದ್ದೇಶದಿಂದಾಗಿ ಅಪಹರಣದ ನಾಟಕವಾಡಿರುವುದು ತಿಳಿದು ಬಂದಿದೆ. ಪೊಲೀಸರ ಮುಂದೆ ಯುವತಿ ಬಾಯಿ ಬಿಟ್ಟಿದ್ದಾಳೆ. ಇದನ್ನು ಬಿಟ್ಟರೆ ಬೇರೆ ಯಾವ ಉದ್ದೇಶ ಇರಲಿಲ್ಲ ಎಂದಿದ್ದಾಳಂತೆ.
ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನಿಂದ ಬೆಳ್ತಂಗಡಿಗೆ ಬಂದಿದ್ದರು. ಶಾಸಕ ಹರೀಶ್ ಪೂಂಜಾ ಸಹ ವಿದ್ಯಾರ್ಥಿನಿಯನ್ನು ಭೇಟಿಯಾಗಿದ್ದಾರೆ. ಮನೆಯಲ್ಲಿ ಪುಸ್ತಕಗಳನ್ನು ಸುಟ್ಟು ಹಾಕಿದ್ದಾಳೆ. ದಾರಿಯಲ್ಲಿ ಬ್ಯಾಗ್ ಬಿಸಾಕಿದ್ದಾಳೆ. ಸ್ಕೂಟಿಯನ್ನು ನಿಲ್ಲಿಸಿದ್ದಾಳೆ. ನಂತರ ಕಿಡ್ನಾಪ್ ನಾಟಕವಾಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಷಕರು ಮಂಗಳೂರು ಕಾಲೇಜಿಗೆ ಸೇರುವ ಕಾರಣಕ್ಕೆ ಇಂತಹದೊಂದು ನಾಟಕವಾಡಿದ್ದಾಳಂತೆ.




