Ad imageAd image

ಅಮೆರಿಕ-ಇರಾನ್ ಯುದ್ಧ: ಮಾತುಕತೆಗೆ ಇಸ್ಲಾಮಾಬಾದ್ ಗೆ ಬಂದ ಯುಎಸ್ ತಂಡ

Nagesh Talawar
ಅಮೆರಿಕ-ಇರಾನ್ ಯುದ್ಧ: ಮಾತುಕತೆಗೆ ಇಸ್ಲಾಮಾಬಾದ್ ಗೆ ಬಂದ ಯುಎಸ್ ತಂಡ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಇಸ್ಲಾಮಾಬಾದ್(Islamabad): ಅಮೆರಿಕ, ಇರಾನ್ ಹಾಗೂ ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ, ಮಹತ್ವದ ಮಾತುಕತೆಗೆ ಅಮೆರಿಕ ಹಾಗೂ ಇರಾನ್ ತಂಡಗಳು ಪಾಕಿಸ್ತಾನದ ಇಸ್ಲಾಮಾಬಾದ್ ಗೆ ಬಂದಿವೆ. ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಸೇರಿದಂತೆ ಉನ್ನತ ಅಧಿಕಾರಿಗಳ ತಂಡ ಶನಿವಾರ ಮಧ್ಯಾಹ್ನ ಇಲ್ಲಿಗೆ ಬಂದಿದೆ.

ಇದಕ್ಕೂ ಮೊದಲು ಇರಾನ್ ಪ್ರತಿನಿಧಿಯ ಮಂಡಳಿಯು ಇಸ್ಲಾಮಾಬಾದ್ ಗೆ ಆಗಮಿಸಿದೆ. ಇದರಲ್ಲಿ ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಂಡದ ನೇತೃತ್ವ ವಹಿಸಿದ್ದಾರೆ. ಎರಡು ರಾಷ್ಟ್ರಗಳ ಗಣ್ಯರನ್ನು ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್, ರಾಷ್ಟ್ರೀಯ ಸಭೆಯ ಸ್ಪೀಕರ್ ಆಯಾಜ್ ಸಾದಿಕ್, ಸೇನಾ ಮುಖ್ಯಸ್ಥ ಸಯ್ಯದ್ ಆಸಿಂ ಮುನೀರ್ ಹಾಗೂ ಗೃಹ ಸಚಿವ ಸಯ್ಯದ್ ಮೊಹ್ಸಿನ್ ರಝಾ ನಕ್ವಿ ಸ್ವಾಗತಿಸಿದ್ದಾರೆ.

WhatsApp Group Join Now
Telegram Group Join Now
Share This Article